ದಾವಣಗೆರೆ, ಜೂ.11- ಆವರಗೆರೆಯ ಶ್ರೀ ಸಿದ್ದಲಿಂಗೇಶ್ವರ ವಿದ್ಯಾಸಂಸ್ಥೆ ಆಶ್ರಯದಲ್ಲಿ ನಡೆಸುತ್ತಿರುವ ಶ್ರೀ ಗುರು ಪಂಚಾಕ್ಷರಿ ಗವಾಯಿ ಮೆಮೋರಿಯಲ್ ಕಾಂಪೋಜಿಟ್ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು.
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಕಾರ್ಯದರ್ಶಿ ಎಂ. ಗುರುಸಿದ್ದಸ್ವಾಮಿ ಮಾತನಾಡಿ, ಪರಿಸರದೊಂದಿಗಿನ ಮಾನವ ಸಂಬಂಧಗಳು, ಕಾಡು ನಾಶದಿಂದ ಪರಿಸರಕ್ಕೆ ಹಾನಿಯಾಗುತ್ತಿರುವುದನ್ನು, ಬಗೆಹರಿಸುವ ವಿಧಾನವನ್ನು ಹಾಗೂ ಈ ಸಾಲಿನ ಕರ್ನಾಟಕದ ಜಾಗತಿಕ ತಾಪಮಾನ ಹೆಚ್ಚಳವಾಗುವುದರ ಪರಿಣಾಮಗಳನ್ನು ಹಾಗೂ ತಾಪಮಾನದ ಏರಿಳಿತವನ್ನು ವಿವರಿಸಿದರು.
ಪರಿಸರ ಸಂರಕ್ಷಣಾ ವೇದಿಕೆಯ ಅಧ್ಯಕ್ಷ ಗಿರೀಶ್ ದೇವರಮನಿ ಮಾತನಾಡಿ, ಪರಿಸರದ ವಿವಿಧ ಅಂಶಗಳ ಬಗೆಗೆ ಅಂದರೆ ನೈಸರ್ಗಿಕ ಪರಿಸರ ಹಾಗೂ ಕೃತಕ ಪರಿಸರದ ವ್ಯತ್ಯಾಸಗಳನ್ನು ಅತಿ ಸೂಕ್ಷ್ಮವಾಗಿ ಉದಾಹರಣೆಗಳನ್ನು ನೀಡಿದರು.
ಸಂಸ್ಥೆಯ ನಿರ್ದೇಶಕರಾದ ಶ್ರೀಮತಿ ಸುಗ್ಗಲಾದೇವಿ ಅಧ್ಯಕ್ಷತೆ ವಹಿಸಿದ್ದರು.
2023 ರ ವಿಶ್ವ ಪರಿಸರ ದಿನಾಚರಣೆಯ ಘೋಷ ವಾಕ್ಯವಾದ 3 (ಆರ್) ಇದರ ಸಂಕ್ಷಿಪ್ತತೆಯನ್ನು (Reduce, Recycle, Reuse) ಎಂಬ ಪದಗಳ ವಿವರಗಳನ್ನು ವಿವರಿಸಿ, ಮಕ್ಕಳಿಗೆ ಪರಿಸರದ ಬಗೆಗಿನ ಕಾಳಜಿ ವ್ಯಕ್ತಪಡಿಸಿದರು.
ಸಂಸ್ಥೆಯ ಸಹ ಶಿಕ್ಷಕಿ ಶ್ರೀಮತಿ ಪೂರ್ಣಿಮಾ ಎಸ್.ವಿ. ಅವರು ಪರಿಸರದ ಮಾಹಿತಿಯನ್ನು ಹಾಗೂ 6ನೇ ತರಗತಿಯ ಸಿಂಚನಾ ಆರ್. ಅವರು ತಮ್ಮ ಪರಿಸರದ ಬಗ್ಗೆ ಇರುವ ಕಾಳಜಿಯನ್ನು ಮಕ್ಕಳಿಗೆ ತಿಳಿಹೇಳಿದರು.