ದಾವಣಗೆರೆ, ಜೂ. 11- ವಿನೂತನ ಮಹಿಳಾ ಸಮಾಜದಲ್ಲಿ ಈಚೆಗೆ ಪರಿಸರ ದಿನಾಚರಣೆ ಆಚರಿಸಲಾಯಿತು. ಚಂದ್ರಿಕಾ ಮಂಜುನಾಥ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪರಿಸರ ಗೀತೆ ಹಾಗೂ ಬರವಣಿಗೆ ಸ್ಪರ್ಧೆ ಏರ್ಪಡಿಸ ಲಾಗಿತ್ತು. ಸ್ಪರ್ಧೆಯ ತೀರ್ಪುಗಾರರು ಹಾಗೂ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಶ್ರೀಮತಿ ವೀಣಾ ಹೆಗಡೆ ಉಪಸ್ಥಿತರಿದ್ದರು.
ಪರಿಸರ ಗೀತೆ ಸ್ಪರ್ಧೆಯಲ್ಲಿ ಪೂರ್ಣಿಮಾ ಬಸವರಾಜ್ (ಪ್ರಥಮ), ಭಾರತಿ ಗಣೇಶ್ (ದ್ವಿತೀಯ), ಪುಷ್ಪಲತಾ (ತೃತೀಯ), ಪ್ರಸನ್ನ ಚಂದ್ರಪ್ರಭು, ಗುರುಬಸವರಾಜ್ (ಸಮಾಧಾನಕರ ಬಹುಮಾನ) ಬಹುಮಾನ ಪಡೆದುಕೊಂಡರು.
ಬರವಣಿಗೆ ಸ್ಪರ್ಧೆಯಲ್ಲಿ ಪೂರ್ಣಿಮಾ ಬಸವರಾಜ್, ಮಾಲತಿ ಪ್ರಸನ್ನ, ಭಾರತಿ ಗಣೇಶ್ ಬಹುಮಾನ ಪಡೆದರು.
ಸುಧಾ ಪಾಟೀಲ್ ನಿರೂಪಿಸಿದರು. ಭುವನೇಶ್ವರಿ ವಂದಿಸಿದರು. ಹೇಮಾ ಗಣೇಶ್, ಇಂದಿರಾ ರೆಡ್ಡಿ, ಮಮತಾ ನಾಗರಾಜ್, ಸುಕನ್ಯಾ ಬಸವರಾಜ್, ಲತಾ ಸತೀಶ್, ರತ್ನಾ ರೆಡ್ಡಿ ಉಪಸ್ಥಿತರಿದ್ದರು.