ಮಲೇಬೆನ್ನೂರು, ಜೂ.11- ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ನುಡಿದಂತೆ ಎಲ್ಲಾ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಚಾಲನೆ ನೀಡಿರುವುದನ್ನು ಸ್ವಾಗತಿಸಿ, ಮಲೇಬೆನ್ನೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದರು.
ಜಿಟಿ ಜಿಟಿ ಮಳೆಯಲ್ಲೇ ಇಲ್ಲಿನ ಬಸ್ ನಿಲ್ದಾಣದಲ್ಲಿ ಕೆಎಸ್ಆರ್ಟಿಸಿ ಬಸ್ಗೆ ಅಲಂಕಾರ ಮಾಡಿ, ಬಸ್ ಹತ್ತಿದ ಮಹಿಳೆಯರಿಗೆ ಸಿಹಿ ವಿತರಿಸಿದ ಕಾಂಗ್ರೆಸ್ ಕಾರ್ಯಕರ್ತರು, ನಂತರ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಮಾಜಿ ಶಾಸಕ ಎಸ್.ರಾಮಪ್ಪ, ಕಾಂಗ್ರೆಸ್ ಮುಕಂಡ ನಂದಿಗಾವಿ ಶ್ರೀನಿವಾಸ್ ಅವರು ಮಹಿಳೆಯರಿಗೆ ಉಚಿತ ಬಸ್ ಟಿಕೆಟ್ ನೀಡಿ, ಪ್ರಯಾಣಕ್ಕೆ ಶುಭ ಕೋರಿದರು.
ಎಪಿಎಂಸಿ ಮಾಜಿ ಅಧ್ಯಕ್ಷ ಜಿ.ಮಂಜುನಾಥ್ ಪಟೇಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ಅಬೀದ್ ಅಲಿ, ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಕುಂಬಳೂರು ವಾಸು, ಮುಖಂಡರಾದ ಸೈಯದ್ ಜಾಕೀರ್, ಎಳೆಹೊಳೆ ಕುಮಾರ್, ಹಾಲಿವಾಣ ರೇವಣಸಿದ್ದಪ್ಪ, ಆದಾಪುರ ಹನುಮಂತಪ್ಪ, ಕೊಕ್ಕನೂರಿನ ಎ.ಕೆ.ಬಸವರಾಜಪ್ಪ, ಪುರಸಭೆ ಸದಸ್ಯರಾದ ನಯಾಜ್, ಖಲೀಲ್ ದಾದಾಫೀರ್, ಪಕೃದ್ಧೀನ್, ಕೊಟ್ರೇಶ್ ನಾಯ್ಕ, ಪೂಜಾರ್ ಹಾಲೇಶ್, ಪಿ.ಬಿ.ಬೀರಪ್ಪ, ಕೊಮಾರನಹಳ್ಳಿಯ ಎಸ್.ಎಂ.ಮಂಜುನಾಥ್ ಮತ್ತಿತರರು ಈ ವೇಳೆ ಹಾಜರಿದ್ದರು.