ದಾವಣಗೆರೆ, ಜೂ. 9- ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ತಡೆ ಕಾಯ್ದೆ 2013 ಕುರಿತು ನಗರದ ಪ್ರಧಾನ ಅಂಚೆ ಕಚೇರಿಯಲ್ಲಿ ಕಾರ್ಯಾಗಾರವನ್ನು ನಡೆಸಲಾಯಿತು. ವಕೀಲರಾದ ಸಿ.ಪಿ. ಅನಿತಾ ಅವರು ಕಾಯಿದೆಯ ನಿಬಂಧನೆಗಳನ್ನು ವಿವರಿಸಿದರು. ಇದೇ ವೇಳೆ ಸಿ.ಪಿ. ಅನಿತಾ ಅವರ ಭಾವಚಿತ್ರವಿರುವ ಮೈ ಸ್ಟಾಂಪ್ ಅಂಚೆ ಚೀಟಿಯನ್ನು ನೀಡುವ ಮೂಲಕ ದಾವಣಗೆರೆ ವಿಭಾಗದ ಅಂಚೆ ಅಧೀಕ್ಷಕ ಚಂದ್ರಶೇಖರ್ ಹಾಗೂ ಅಂಚೆ ಸಹಾಯಕ ಅಧೀಕ್ಷಕರಾದ ಗುರುಪ್ರಸಾದ್ ಅವರು ಸನ್ಮಾನಿಸಿದರು.
ಅಂಚೆ ಕಚೇರಿಯಲ್ಲಿ ಲೈಂಗಿಕ ಕಿರುಕುಳ ತಡೆ ಕಾಯ್ದೆ ಕಾರ್ಯಾಗಾರ
