ಮಲೇಬೆನ್ನೂರು, ಜೂ. 9 – ಮಲೇಬೆನ್ನೂರು ಹೋಬಳಿ ವ್ಯಾಪ್ತಿಯ ಜಿ ಟಿ ಕಟ್ಟೆ ಕ್ಯಾಂಪಿನ ಗೋಮಾಳದಲ್ಲಿ ಅಕ್ರಮವಾಗಿ ನಿರ್ಮಿಸಿಕೊಳ್ಳುತ್ತಿದ್ದ ಗುಡಿಸಲು ಮನೆಗಳನ್ನು, ಕಲ್ಲುಕಂಬಗಳನ್ನು ಕಂದಾಯ, ಪೊಲೀಸ್ ಇಲಾಖೆ ಅಧಿಕಾರಿಗಳು ಗುರುವಾರ ಜೆಸಿಬಿ ಮೂಲಕ ತೆರವುಗೊಳಿಸಿದ ಘಟನೆ ನಡೆದಿದೆ. 35 ನಿವೇಶನಗಳಲ್ಲಿ ಅಕ್ರಮವಾಗಿ ಕಲ್ಲುಕಂಬ ನೆಟ್ಟು, ಗುಡಿಸಲುಹಾಕಿಕೊಂಡಿದ್ದರು.
ತಹಶೀಲ್ದಾರ್ ಪೃಥ್ವಿ ಸಾನಿಕಂ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಎನ್ ರವಿ. ಕಂದಾಯ ನಿರೀಕ್ಷಕ ಆನಂದ್, ಗ್ರಾಮಾಡಳಿತಾಧಿಕಾರಿ ಬೋರಯ್ಯ, ಕೊಕ್ಕನೂರು ಪಿಡಿಒ ನಾಗರಾಜ್ ಈ ವೇಳೆ ಹಾಜರಿದ್ದು ಅತಿಕ್ರಮಣ ತೆರವು ಮಾಡಿಸಿದರು.
ಗುಡಿಸಲು ನಿರ್ಮಿಸಿಕೊಂಡಿದ್ದ ಜನತೆ ತೆರವು ಮಾಡದಂತೆ ಹಾಗೂ ನಿವೇಶನ ಹಕ್ಕುಪತ್ರ ನೀಡುವಂತೆ ಅಧಿಕಾರಿಗಳಲ್ಲಿ ಮನವಿ ಮಾಡಿದರು. ಇದಕ್ಕೆ ಉಪಸ್ಥಿತ ಅಧಿಕಾರಿಗಳು ಒಪ್ಪಲಿಲ್ಲ. ಅನಧಿಕೃತ ಹಾಗೂ ಅತಿಕ್ರಮ ಪ್ರವೇಶಕ್ಕೆ ಅವಕಾಶನೀಡುವುದಿಲ್ಲ. ತೆರವು ಮಾಡುವುದಾಗಿ ಪಟ್ಟು ಹಿಡಿದರು..
ಸರ್ಕಾರದ ಭೂಮಿ ಅತಿಕ್ರಮ ಪ್ರವೇಶ ಮಾಡಿದರೆ ಕಾನೂನು ರೀತ್ಯ ಕ್ರಮಜರುಗಿಸುವ ಎಚ್ಚರಿಕೆ ನೀಡಿ, ಅಕ್ರಮವಾಗಿ ನಿರ್ಮಿಸಿಕೊಂ ಡಿದ್ದ, ನಿರ್ಮಾಣಹಂತದಲ್ಲಿದ್ದ, ಗುಡಿಸಲು ಮನೆ ಗಳನ್ನು ನೆಟ್ಟಿದ್ದ ಕಲ್ಲುಕಂಬ ತೆರವುಮಾಡಿದರು.
ಕೊನೆಗೆ ಮಾತುಕತೆ ನಡೆದು ಗ್ರಾಮ ಪಂಚಾಯತಿ ಮೂಲಕ ನಿವೇಶನ ಸಮಸ್ಯೆಶಾಶ್ವತವಾಗಿ ಪರಿಹರಿಸಲು ಒಂದು ಠರಾವು ಮಾಡಿ ಮೇಲಾಧಿಕಾರಿಗಳಿಗೆ ಕಳುಹಿಸಲು ತಾಕೀತು ಮಾಡಿದರು.
ಸಿಪಿಐ ಗೌಡಪ್ಪ ಗೌಡ ನೇತೃತ್ವದಲ್ಲಿ ಪಿಎಸ್ಐ ರವಿಕುಮಾರ್, ಪ್ರಭುಕೆಳಗಿನಮನೆ, ಜಿಲ್ಲಾ ಸಶಸ್ತ್ರ ಮೀಸಲು ಪಡೆ ಪೊಲೀಸರು ಭದ್ರತೆ ಒದಗಿಸಿದ್ದರು.