ದಾವಣಗೆರೆ, ಜೂ.9- ಶ್ರೀ ರೇಣುಕಾ ಬ್ರಾಸ್ ಬ್ಯಾಂಡ್ ಆರ್ಕೆಸ್ಟ್ರಾ ಹಾಗೂ ಜಾನಪದ ಸಂಗೀತ ಸಾಂಸ್ಕೃತಿಕ ಕಲಾ ಸಂಸ್ಥೆ, ಎಸ್. ಸಿರಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಕಾರದೊಂದಿಗೆ ಬಸವನಾಳ ಗೊಲ್ಲರಹಟ್ಟಿ ಗ್ರಾಮದಲ್ಲಿ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಮಾಯಕೊಂಡ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಎಸ್. ಬಸವಂತಪ್ಪ ಮಾತನಾಡಿ, ಕ್ಷೇತ್ರದಲ್ಲಿ ರಾಜ್ಯ ಮಟ್ಟದ ಸಂಗೀತ ಕಾರ್ಯಕ್ರಮಗಳು ನಡೆಯಬೇಕು. ನನ್ನ ಕ್ಷೇತ್ರದಲ್ಲಿ ಬರುವಂತಹ ಉತ್ತಮವಾದ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹ ನೀಡಿ, ಎಲ್ಲಾ ಕಲಾವಿದರಿಗೆ ಅನುಕೂಲ ಮಾಡಿಕೊಡುವುದಾಗಿ ಭರವಸೆ ನೀಡಿದರು.
ಕಲಾವಿದ ಎಂ. ಶಿವರಾಜ್ ಅವರು ಸ್ಯಾಕ್ಸೋಫೋನ್ ಮೂಲಕ ಸಂಗೀತ ವನ್ನು ನುಡಿಸಿದರು. ಅವರ ಸಾಥಿಯಾಗಿ ಎಚ್.ಇಂಚರ, ದರ್ಶನ್, ಚಂದ್ರು, ಕಿರಣ್ ಕುಮಾರ್, ಉಮೇಶ್ ನಾಯಕ್ ಕಾರ್ಯಕ್ರಮದಲ್ಲಿ ಮೆರಗು ತಂದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ, ಹಿರಿಯ ಕಲಾವಿದ ಮರುಳಸಿದ್ದಪ್ಪ, ಚಲವಾದಿ ಸಂಸ್ಥೆಯ ಅಧ್ಯಕ್ಷ ಎಂ. ಹಾಲೇಶ್, ಕಲಾವಿದ ಗ್ರಾ.ಪಂ. ಸದಸ್ಯ ಎಚ್. ಸೋಮಶೇಖರಪ್ಪ, ನಂದನಾಯಕ್ ಚಿನ್ನಸಮುದ್ರ, ಉಮೇಶ್ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.