ದಾವಣಗೆರೆ, ಜೂ. 9- ವಿನೋಬನಗರದಲ್ಲಿರುವ ಶ್ರೀಮತಿ ಸರ್ವ ಮಂಗಳಮ್ಮ ಮಾಗನೂರು ಬಸಪ್ಪ ಶಾಲೆಯಲ್ಲಿ ಶ್ರೀ ವಜ್ರೇಶ್ವರಿ ಮಹಿಳಾ ಸಂಸ್ಥೆಯಿಂದ ಪರಿಸರ ದಿನಾಚರಣೆ ಆಚರಿಸಲಾಯಿತು.
ವಜ್ರೇಶ್ವರಿ ಸಂಸ್ಥೆಯ ಅಧ್ಯಕ್ಷರಾದ ವಿಜಯ ಅಕ್ಕಿ ಅವರು ಅಧ್ಯಕ್ಷತೆ ವಹಿಸಿದ್ದರು. ಶಾಲೆಯ ಮುಖ್ಯೋಪಾಧ್ಯಾಯರಾದ ಉಜ್ಜಿನಪ್ಪ, ಸಂಸ್ಥೆಯ ಕಾರ್ಯದರ್ಶಿ ಗೀತಾ ಪ್ರಭಾಕರ್, ನಿರ್ದೇಶಕರಾದ ಗಿರಿಜ ಬಿಲ್ಲಳ್ಳಿ, ಸಾವಿತ್ರಿ ನೆಸ್ವಿ, ಶಶಿಕಲಾ ಪ್ರಕಾಶ್ ಉಪಸ್ಥಿತರಿದ್ದರು.