ಜಗಳೂರು : ಲೋಕೋಪಯೋಗಿ ಇಲಾಖೆ ಎಇಇ ಯು.ರುದ್ರಪ್ಪ ಸೇವಾ ನಿವೃತ್ತಿ

ಜಗಳೂರು : ಲೋಕೋಪಯೋಗಿ ಇಲಾಖೆ ಎಇಇ ಯು.ರುದ್ರಪ್ಪ ಸೇವಾ ನಿವೃತ್ತಿ

ಜಗಳೂರು, ಜೂ. 5- ಯಶಸ್ವಿಯಾಗಿ ಕಾರ್ಯನಿರ್ವಹಿಸಲು ಸಹಕರಿಸಿದ ಸಹದ್ಯೋಗಿಗಳು ಮತ್ತು ಸಾರ್ವಜನಿಕರಿಗೆ  ಚಿರಋಣಿಯಾಗಿರುವೆ ಎಂದು ಲೋಕೋಪಯೋಗಿ ಇಲಾಖೆ ಎಇಇ ಯು.ರುದ್ರಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.

ಪಟ್ಟಣದ ಲೊಕೋಪಯೋಗಿ ಇಲಾಖೆ ಆವರಣದಲ್ಲಿ ಇಂದು ಎಇಇ ಯು.ರುದ್ರಪ್ಪ ಅವರಿಗೆ ನಿವೃತ್ತಿ ಹಿನ್ನೆಲೆಯಲ್ಲಿ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ, ಅವರು ಮಾತನಾಡಿದರು.

ನಾನು ತಾಲ್ಲೂಕಿನ ಮರಿಕುಂಟೆ ಗ್ರಾಮದಲ್ಲಿ ಜನಿಸಿ, ಪೋಷಕರ ಸಹಕಾರದಿಂದ ಬಾಲ್ಯ ಹಾಗೂ ಪ್ರೌಢ ಶಿಕ್ಷಣ ಹಂತದಲ್ಲಿ ಉತ್ತಮ ವ್ಯಾಸಂಗ ಮಾಡಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.66 ಅಂಕ ಪಡೆದು ತಾಲ್ಲೂಕಿಗೆ ಅಗ್ರ ಸ್ಥಾನ ಪಡೆದು ರೂ. 100 ನಗದು ಬಹುಮಾನ, ಪ್ರತಿಭಾ ಪುರಸ್ಕಾರ ಪಡೆದಿದ್ದು, ಭವಿಷ್ಯದ ಮೊದಲ ಮೆಟ್ಟಿಲು ಇಂದಿಗೂ ಅವಿಸ್ಮರಣೀಯ. ವಿವಿಧ ಇಲಾಖೆಗಳಲ್ಲಿ ಸೇವೆ ಗೈದು ಇಂದು  ಸ್ವಂತ  ತಾಲ್ಲೂಕಿನಲ್ಲಿ  ನಿವೃತ್ತಿ ಯಾಗುತ್ತಿರುವುದು ಹರ್ಷ ತಂದಿದೆ ಎಂದರು.

ಈ ಸಂದರ್ಭದಲ್ಲಿ ತಾ.ಪಂ ಇಓ ಚಂದ್ರಶೇಖರ್, ಸಹಾಯಕ ಇಂಜಿನಿಯರ್ ಪುಟ್ಟಸ್ವಾಮಿ, ರಾಮಚಂದ್ರಪ್ಪ, ಜಿ.ಪಂ ಎಇಇ ತಿಪ್ಪೇಸ್ವಾಮಿ, ಪತ್ನಿ ಶಿವಗಂಗಮ್ಮ ರುದ್ರಪ್ಪ, ಇಂಜಿನಿಯರ್‌ಗಳಾದ  ದಯಾನಂದ್, ಪುರುಷೋತ್ತಮ, ಸಂಜೀವ್ ಕುಮಾರ್, ಪ್ರಭುಸ್ವಾಮಿ, ಚೈತ್ರ, ವ್ಯವಸ್ಥಾಪಕ ಅವಿನಾಶ್, ಸತ್ಯಪ್ಪ ಹಾಗೂ ಗುತ್ತಿಗೆದಾರರು  ಇದ್ದರು.

error: Content is protected !!