ಹಾಲಿವಾಣ : 55 ಎಕರೆ ಭತ್ತದ ಹುಲ್ಲಿನ ಬಣವೆ ಭಸ್ಮ

ಹಾಲಿವಾಣ : 55 ಎಕರೆ ಭತ್ತದ ಹುಲ್ಲಿನ ಬಣವೆ ಭಸ್ಮ

ಮಲೇಬೆನ್ನೂರು, ಜೂ.4- ಹಾಲಿವಾಣ ಗ್ರಾಮದಲ್ಲಿ ಭಾನುವಾರ ಬೆಳಗಿನ ಜಾವ ಸಂಭವಿಸಿದ ಅಗ್ನಿ ಆಕಸ್ಮಿಕದಲ್ಲಿ 50 ಲೋಡ್ ಭತ್ತದ ಹುಲ್ಲಿನ ಬಣವೆ ಅಗ್ನಿಗೆ ಆಹುತಿ ಆಗಿದೆ.

ಸುಟ್ಟ ವಾಸನೆ ಹರಡುತ್ತಿದ್ದಂತೆ ಗ್ರಾಮಸ್ಥರು, ಯುವಕರು ಟ್ಯಾಂಕರ್, ಪೈಪ್ ಮೂಲಕ ನೀರು ಸಿಂಪರಣೆ ಮಾಡಿ ಬೆಂಕಿ ನಂದಿಸಲು ಯತ್ನಿಸಿದರು.ಹರಿಹರದಿಂದ ಆಗಮಿಸಿದ 2 ಅಗ್ನಿಶಾಮಕ ದಳದ ಯಂತ್ರಗಳು ಬೆಂಕಿ ನಂದಿಸಿದರು.

ಹುಲ್ಲಿನ ಬಣವೆಗಳು ಮೋಹನ, ಮಲ್ಲೇಶಪ್ಪ, ಗುರುಬಸಪ್ಪ, ದೇವೇಂದ್ರಪ್ಪ, ಶಿವಾನಂದಪ್ಪ, ಕಡದಕಟ್ಟೆ ಬಾಲಪ್ಪ, ಜಗದೀಶ್, ಚಂದ್ರಶೇಖರಪ್ಪ, ಗೊಗ್ಗದ
ನಾಗಪ್ಪ ಎಂಬುವವರಿಗೆ ಸೇರಿದ್ದು, 55 ಎಕರೆಗೂ ಹೆಚ್ಚು ಒಣಗಿದ ಭತ್ತದ ಸುಟ್ಟ ಹುಲ್ಲಿನ ಮೌಲ್ಯ ಸುಮಾರು 5 ಲಕ್ಷ ರೂ. ಎಂದು ಗ್ರಾಮಸ್ಥರು ಅಂದಾಜಿಸಿದ್ದಾರೆ. ಅಗ್ನಿ ಆಕಸ್ಮಿಕದ ಘಟನೆಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ.

ಅಗ್ನಿ ಶಾಮಕ ದಳದ ಸಿಬ್ಬಂದಿಗಳಾದ ಸಂಜೀವ್ ಕುಮಾರ್, ಬಸವರಾಜಪ್ಪ, ಎಂ.ಪಿ.ಕುಮಾರ್, ದಾದಾಪೀರ್, ಬಾಲಕುಮಾರ್, ಮಹೇಶ್, ಗವಿ ಭೂಷಣ್, ಹೊಸೂರು ನಾಯಕ ಬೆಳಕೇರಿ ಬೆಂಕಿ ನಂದಿಸುವ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

ಗ್ರಾ.ಪಂ ಅಧ್ಯಕ್ಷ ಚಿಕ್ಕಪ್ಪ, ತಾ.ಪಂ  ಮಾಜಿ  ಅಧ್ಯಕ್ಷ ಎಸ್.ಜಿ.ಪರಮೇಶ್ವರಪ್ಪ, ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್ ಸೇರಿದಂತೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ರೈತರಿಗೆ ಸಾಂತ್ವನ ಹೇಳಿ ನೆರವಿನ ಭರವಸೆ ನೀಡಿದ್ದಾರೆ.

error: Content is protected !!