ಬೆಳೆಗಳಿಗೆ ಜೈವಿಕ ಗೊಬ್ಬರಗಳಿಂದ ಬೀಜೋಪಚಾರ ಮಾಡಲು ಸಲಹೆ

ಬೆಳೆಗಳಿಗೆ ಜೈವಿಕ ಗೊಬ್ಬರಗಳಿಂದ ಬೀಜೋಪಚಾರ ಮಾಡಲು ಸಲಹೆ

ರೈತರಿಗೆ ಬಿ.ಓ. ಮಲ್ಲಿಕಾರ್ಜುನ್ ಸಲಹೆ

ದಾವಣಗೆರೆ, ಮೇ 30- ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರ, ದಾವಣಗೆರೆ ಹಾಗೂ ಬಿದರಕೆರೆ ತರಳಬಾಳು ಅಮೃತ ರೈತ ಉತ್ಪಾದಕ ಕಂಪನಿಯ ಸಹಯೋಗದಲ್ಲಿ ಮುಂಚೂಣಿ ಪ್ರಾತ್ಯಕ್ಷಿಕೆಯ ಮೆಕ್ಕೆಜೋಳದಲ್ಲಿ ಅಂತರ ಬೆಳೆಯಾಗಿ ತೊಗರಿಯ ಹೊರ ಆವರಣ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಬೇಸಾಯ ತಜ್ಞ ಬಿ.ಓ. ಮಲ್ಲಿಕಾರ್ಜುನ್‌ ಮಾತನಾಡುತ್ತಾ, ಮೆಕ್ಕೆಜೋಳವನ್ನು ಏಕ ಬೆಳೆ ಬೆಳೆಯುವುದರ ಬದಲು ಮಳೆಯಾಶ್ರಿತ ಪ್ರದೇಶಗಳಲ್ಲಿ ಅಂತರ ಬೆಳೆಯಾಗಿ ತೊಗರಿಯನ್ನು ಬೆಳೆಯುವುದು ಸೂಕ್ತ.

ತೊಗರಿಯಲ್ಲಿ  ಮಧ್ಯಮ ಅವಧಿ ತಳಿಯನ್ನು ಬಿತ್ತನೆ ಮಾಡುವ ಸಂದರ್ಭದಲ್ಲಿ ರೈತ ಬಾಂಧವರು ಜೈವಿಕ ಗೊಬ್ಬರಗಳಾದ ಅಜಟೋಬ್ಯಾಕ್ಟರ್ 500 ಗ್ರಾಂ ಪ್ರತೀ ಎಕರೆ ಮೆಕ್ಕೆಜೋಳ ಬೀಜಕ್ಕೆ ಹಾಗೂ ರೈಸೋಬಿ ಯಂ, ರಂಜಕ ಕರಗಿಸುವ ಗೊಬ್ಬರ ತಲಾ 500 ಗ್ರಾಂ ಪ್ರತಿ ಎಕರೆ ತೊಗರಿ ಬೀಜಕ್ಕೆ ಜೀಜೋಪಚಾರ ಮಾಡಿ ಬಿತ್ತನೆ ಮಾಡುವುದರಿಂದ ಸಾರಜನಕ ಸ್ಥೀರೀಕರಣವಾಗುತ್ತದೆ.  ಶಿಫಾರಸ್ಸು ಮಾಡಿದ ರಾಸಾಯನಿಕ ಗೊಬ್ಬರ ವನ್ನು ಶೇಕಡ 20 ರಷ್ಟು ಕಡಿಮೆ ಮಾಡಬ ಹುದು ಎಂದರು. ಪ್ರಾತ್ಯಕ್ಷಿಕೆಯ ರೈತರಿಗೆ ತೊಗರಿ ಬೀಜ ಹಾಗೂ ಜೈವಿಕ ಗೊಬ್ಬರ ನೀಡಲಾಯಿತು.

ಕಾರ್ಯಕ್ರಮದಲ್ಲಿ ಜಗಳೂರು ಕೃಷಿ ಇಲಾಖೆಯ ಅಧಿಕಾರಿ ಬೀರಪ್ಪ, ತೋಟಗಾರಿಕೆ ತಜ್ಞ ಎಂ.ಜಿ. ಬಸವನಗೌಡ, ಜಿಲ್ಲಾ ಯೋಜನಾ ಸಂಯೋಜಕ ಎನ್.ಆರ್. ಆಕಾಶ್, ಕಂಪನಿಯ ಅಧ್ಯಕ್ಷ ಮಂಜುನಾಥ್, ಪ್ರಗತಿಪರ ರೈತರು ಹಾಗೂ ಕಂಪನಿ ನಿರ್ದೇಶಕರು ಉಪಸ್ಥಿತರಿದ್ದರು.

error: Content is protected !!