ಚಿತ್ರದುರ್ಗ, ಮೇ 29- ಬಿಜೆಪಿ ಶಾಸಕ ಬಿ.ವೈ.ವಿಜಯೇಂದ್ರ ಸಿರಿಗೆರೆಯ ಶ್ರೀ ತರಳಬಾಳು ಬೃಹನ್ಮಠಕ್ಕೆ ಇಂದು ಭೇಟಿ ನೀಡಿ, ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರಿಂದ ಆಶೀರ್ವಾದ ಪಡೆದರು.
ಶಾಸಕನಾದ ಬಳಿಕ ಸಿರಿಗೆರೆ ಮಠಕ್ಕೆ ಮೊದಲ ಭೇಟಿ ನೀಡಿ, ತರಳಬಾಳು ಶ್ರೀಗಳ ದರ್ಶನ, ಆಶೀರ್ವಾದ ಪಡೆದಿದ್ದೇನೆ. ಅಪ್ಪಾಜಿ ಬಿ.ಎಸ್ ಯಡಿಯೂರಪ್ಪ ಅವರಂತೆ ರಾಜಕಾರಣ, ಅಭಿವೃದ್ಧಿಗೆ ಶ್ರೀಗಳ ಆಶೀರ್ವಾದ ಬೇಕಿದೆ ಎಂದರು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಬೆಳೆಯುವಂತೆ ಶ್ರೀಗಳು ಕಿವಿಮಾತು ಹೇಳಿರುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಭರಮಸಾಗರದ ಮುಖಂಡ ಡಿ.ಎಸ್. ಪ್ರವೀಣ್ ಕುಮಾರ್ ಇತರರು ಉಪಸ್ಥಿತರಿದ್ದರು.