`ಮಲ್ಲಿಕಾ’ ಉತ್ಸವಕ್ಕೆ ವರುಣನ ಸಿಂಚನ

`ಮಲ್ಲಿಕಾ’ ಉತ್ಸವಕ್ಕೆ ವರುಣನ ಸಿಂಚನ

ದಾವಣಗೆರೆ, ಮೇ 29- ನಗರದ ಜಿ.ಎಂ. ತಾಂತ್ರಿಕ ಮಹಾವಿದ್ಯಾಲಯದ ದಿ. ಜಿ.ಮಲ್ಲಿಕಾರ್ಜುನಪ್ಪ ತೆರೆದ ಸಭಾಂಗಣದಲ್ಲಿ ಸೋಮವಾರ ಸಂಜೆ ವರುಣನ ಆಗಮನದ ನಡುವೆಯೂ `ಮಲ್ಲಿಕಾ-2023′ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಕಾಲೇಜಿನ ಆವರಣದಲ್ಲಿ ಹಬ್ಬದ ಸಂಭ್ರಮದ ರೀತಿಯಲ್ಲಿ `ಮಲ್ಲಿಕಾ’ ಉತ್ಸವದಲ್ಲಿ ವಿದ್ಯಾರ್ಥಿ-ವಿದ್ಯಾ ರ್ಥಿನಿಯರು ಬಗೆ ಬಗೆಯ ದಿರಿಸುಗಳನ್ನು ಧರಿಸಿ, ಪರಸ್ಪರ ಸೆಲ್ಫಿ, ಗ್ರೂಪ್ ಪೋಟೋ ತೆಗೆಸಿಕೊಳ್ಳುವ ಮೂಲಕ ಅತ್ಯಂತ ಹರ್ಷದಿಂದ ಪಾಲ್ಗೊಂಡಿದ್ದರು.

ಕಾರ್ಯಕ್ರಮದ ಆರಂಭದಲ್ಲಿ ಖ್ಯಾತ ಸಂಗೀತ ನಿರ್ದೇಶಕ ವಿ. ಮನೋಹರ ಮಾತನಾಡಿ, ಕರ್ನಾಟಕದ ಮಧ್ಯ ಭಾಗದ ಜಿಲ್ಲೆ ದಾವಣಗೆರೆ ರಾಜಧಾನಿಯಾಗಿದ್ದರೆ ಇನ್ನಷ್ಟು ಅಭಿವೃದ್ಧಿ ಕಾಣಬಹುದಿತ್ತೇನೋ ಎಂಬ ಆಶಯ ವ್ಯಕ್ತಪಡಿಸಿದರು.

ದಾವಣಗೆರೆ ಮಧ್ಯಕರ್ನಾಟಕದ ಕೇಂದ್ರ ಬಿಂದುವಾಗಿದ್ದು, ರಾಜಧಾನಿಯಾಗಿದ್ದರೆ ಅಕ್ಕಪಕ್ಕದ ಜಿಲ್ಲೆಗಳಿಗೆ ಅನುಕೂಲವಾಗುವ ಜೊತೆಗೆ ಸರ್ವಾಂಗೀಣ ಪ್ರಗತಿಗೆ ಕಾರಣವಾಗುತ್ತಿತ್ತು ಎಂಬ ಭಾವನೆ ನನ್ನದು ಎಂದರು.

ಜಿಎಂಐಟಿ ಕಾಲೇಜಿನ ಖಜಾಂಚಿ ಜಿ.ಎಸ್. ಅನಿತ್‌ಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಕಾಮಿಡಿ ಕಿಲಾಡಿಗಳು, ಮಹಾಭಾರತ ಕಾರ್ಯಕ್ರಮದ ಹಾಸ್ಯ ಕಲಾವಿದರಾದ ಸಂತೋಷ್, ಕುಂದಾಪುರ ಸೂರ್ಯ, ನಟ, ನಿರ್ಮಾಪಕ ಸತೀಶ್, ರಾಜೀವ್, ಎಂ.ಬಿ.ಎ. ವಿಭಾಗದ ಮುಖ್ಯಸ್ಥ ಡಾ. ಬಸವರಾಜ್, ಡಾ. ಕಿರಣ್ ಕುಮಾರ್, ಅಜ್ಜಯ್ಯ, ಕಲಾವಿದ ಆರ್.ಟಿ. ಅರುಣ್ ಕುಮಾರ್, ಪ್ರೊ. ಬಕ್ಕಪ್ಪ ಪ್ರೊ.ಕೆ.ಎಸ್. ಓಂಕಾರಪ್ಪ ಸೇರಿದಂತೆ ಕಾಲೇಜಿನ ವಿವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು ಉಪಸ್ಥಿತರಿದ್ದರು.

ಇದೇ ವೇಳೆ ಕ್ರೀಡಾ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು.

ಚಂದನಾ ಪ್ರಾರ್ಥಿಸಿದರು. ಪ್ರಾಚಾರ್ಯ ಡಾ. ಎಂ.ಬಿ. ಸಂಜಯ್ ಪಾಂಡೆ ಸ್ವಾಗತಿಸಿದರು. 

error: Content is protected !!