ಹರಿಹರ, ಮೇ 29- ಭಾರತೀಯ ನೌಕಾದಳಕ್ಕೆ ಆಯ್ಕೆಯಾಗಿರುವ ನಗರದ ಕು. ಭೂಮಿಕಾ ವೈ.ಎಂ. ಅವರನ್ನು ಆಕಾರ್ ಆಧಾರ್ ಸಂಸ್ಥೆ ಮತ್ತು ಗಣಪಾಸ್ ಇನ್ನೋವೇಟಿವ್ ಗ್ರೂಪ್ ವತಿಯಿಂದ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಭೂಮಿಕಾ, ಸತತ ಪ್ರಯತ್ನ, ಓದಿದ್ದನ್ನು ಹೆಚ್ಚು ಮನನ ಮಾಡಿಕೊಳ್ಳುವುದು, ಮೊಬೈಲ್ನಿಂದ ದೂರವಿದ್ದದ್ದೇ ನನ್ನ ಯಶಸ್ವಿಗೆ ಮುಖ್ಯ ಕಾರಣವೆಂದರು.
ಅತಿಥಿಗಳಾಗಿ ಭಾಗವಹಿಸಿದ್ದ ಗಣಪಾಸ್ ಇನ್ನೋವೇಟಿವ್ ಗ್ರೂಪ್ನ ಗೌರವಾಧ್ಯಕ್ಷ ಎಸ್.ಎಚ್. ಹೂಗಾರ್ ಮಾತನಾಡಿ, ಕುಮಾರಿ ಭೂಮಿಕಾ ನಮ್ಮ ಹೆಮ್ಮೆಯಾಗಿದ್ದಾಳೆ, ಸತತ ಪರಿಶ್ರಮದ ಹೊರತು ಗೆಲುವಿಗೆ ಇನ್ನಾವುದೇ ದಾರಿಯಿಲ್ಲ ಎಂಬ ಅಂಶವನ್ನು ಸಾಧಿಸಿ ತೋರಿಸಿದ್ದಾಳೆಂದು ಹೇಳಿದರು.
ಎರಡೂ ಸಂಸ್ಥೆಗಳ ವತಿಯಿಂದ ಕುಮಾರಿ ಭೂಮಿಕ ಹಾಗೂ ಅವಳ ಸಾಧನೆಗೆ ಬೆನ್ನೆಲುಬಾಗಿ ನಿಂತ ತಾಯಿ ಲತಾ ಮಂಜುನಾಥ್ ಅವರನ್ನೂ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಆಕಾರ್ ಆಧಾರ್ ಸಂಸ್ಥೆಯ ಅಧ್ಯಕ್ಷ ರಾಮು ಎಂ., ಗಣಪಾಸ್ ಇನ್ನೋವೇಟಿವ್ ಸಂಸ್ಥೆಯ ಅಧ್ಯಕ್ಷ ವಿನಾಯಕ ಜಿ.ಕೆ ಸದಸ್ಯರುಗಳಾದ ಜಗನ್ನಾಥ ಕೆ.ವೈ, ಪ್ರದೀಪ ಎಂ.ಆರ್, ಚನ್ನಕೇಶವ.ಬಿ, ಅರುಣ ಮೂರ್ಕಲ್, ಅಜೀಂ, ಸೈನಿಕರ ಅಭಿಮಾನಿ ನವೀನ್, ಶಿಕ್ಷಕ ಮಲ್ಲಿಕಾರ್ಜುನ ಬಾವಿಕಟ್ಟಿ ಮುಂತಾದವರು ಉಪಸ್ಥಿತರಿದ್ದರು.
ಶ್ವೇತಾ ಸ್ವಾಗತಿಸಿದರು, ಸೌಮ್ಯ ರಾಮು ನಿರೂಪಿಸಿದರು, ನಂದೀಶ್ ಹೆಚ್.ಬಿ. ವಂದಿಸಿದರು.