ಪೈಥಾನ್‌ ಪ್ರೋಗ್ರಾಮಿಂಗ್‌ ಕುರಿತು ಕಾರ್ಯಾಗಾರ

ಪೈಥಾನ್‌ ಪ್ರೋಗ್ರಾಮಿಂಗ್‌ ಕುರಿತು ಕಾರ್ಯಾಗಾರ

ದಾವಣಗೆರೆ, ಮೇ 29 – ನಗರದ ಜೈನ್‌ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿಯ ವಿದ್ಯುತ್‌ ಮತ್ತು ವಿದ್ಯುನ್ಮಾನ ವಿಭಾಗದ ಫೋರಂ ಪೊಟೆಂಝಾ ಅಡಿಯಲ್ಲಿ ಮೂರನೇ ವರ್ಷದ ವಿದ್ಯಾರ್ಥಿಗಳಿಗೆ ದಿನಾಂಕ 24 ರಿಂದ 28 ಮೇ 2023 ರ ವರೆಗೆ ಅಬಿಯಾಂತ್ರಿಕ್ಸ್‌ ಸಾಪ್ಟ್‌ಲ್ಯಾಬ್‌ನ ಸಹಯೋಗದೊಂದಿಗೆ `ಪೈಥಾನ್‌ ಪ್ರೋಗ್ರಾಮಿಂಗ್‌’  ಕುರಿತು ಐದು ದಿನಗಳ ಕಾರ್ಯಾಗಾರ ನಡೆಯಿತು. ಕಾಲೇಜಿನ ಪ್ರಾಂಶುಪಾಲರಾದ ಡಾ. ಡಿ. ಬಿ. ಗಣೇಶ್‌ ,ಸಂಪನ್ಮೂಲ ವ್ಯಕ್ತಿಗಳಾದ ಮಲ್ಲೇಶ್‌ ವಿ. ಎಸ್‌. ಮತ್ತು ಶಿವರಾಜ್‌ ವಿ. ಎಸ್‌.  ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿದರು. ಈ ಸಂದರ್ಭದಲ್ಲಿ  ವಿಭಾಗದ ಮುಖ್ಯಸ್ಥರಾದ ಪ್ರೊ. ಪ್ರೀತಾ ಪಿ. ಎಸ್‌ , ಕಾರ್ಯಾಗಾರದ ಆಯೋಜಕರಾದ ಪ್ರೊ. ಪ್ರದೀಪ್‌ ಕಣವಿ ಮತ್ತು ವಿಭಾಗದ ಎಲ್ಲಾ ಉಪನ್ಯಾಸಕರು ಉಪಸ್ಥಿತರಿದ್ದರು.

error: Content is protected !!