ಹರಿಹರಕ್ಕೆ ಭುವನೇಶ್ವರಿ ರಥಯಾತ್ರೆ

ಹರಿಹರಕ್ಕೆ ಭುವನೇಶ್ವರಿ ರಥಯಾತ್ರೆ

ಹರಿಹರ, ಮೇ 26 – ಬೆಂಗಳೂರಿನಲ್ಲಿ ಬೃಹತ್ ಭುವನೇಶ್ವರಿ ದೇವಿ ಹಾಗೂ ಆಂಜನೇಯಸ್ವಾಮಿ ದೇವಸ್ಥಾನ ನಿರ್ಮಾಣ ಮಾಡುವುದಕ್ಕೆ ಕನ್ನಡನಾಡು ಹಿತರಕ್ಷಣಾ ಸಮಿತಿ ಮುಂದಾಗಿದ್ದು, ಇದರ ಅನ್ವಯ ರಾಜ್ಯದಾದ್ಯಂತ 101ದಿನಗಳ ಕಾಲ ಭುವನೇಶ್ವರಿ ರಥ ಯಾತ್ರೆ ಮಾಡಲಾಗುತ್ತಿದೆ ಎಂದು ಕನ್ನಡನಾಡು ಹಿತರಕ್ಷಣಾ ಸಮಿತಿಯ ರಾಜ್ಯಧ್ಯಕ್ಷರಾದ ಶ್ರೀಮತಿ ಗೀತಾ ಗಿರಿಜಮ್ಮ ತಿಳಿಸಿದರು.

ಬೆಂಗಳೂರಿನಲ್ಲಿ ಜ್ಞಾನಂಜೆನೇಯ ಟ್ರಸ್ಟ್ ವತಿಯಿಂದ ದೇವಸ್ಥಾನ ನಿರ್ಮಾಣದ ಅಭಿಯಾನ ಕೈಗೊಳ್ಳಲಾಗುತ್ತಿದೆ. ಯಾತ್ರೆ ನಗರಕ್ಕೆ ಆಗಮಿಸಿದ ಸಂದರ್ಭದಲ್ಲಿ ಹರಿಹರೇಶ್ವ ದೇವಾಲಯದಲ್ಲಿ ಪೂಜೆ ಸಲ್ಲಿಸಲಾಯಿತು.

ಈಗಾಗಲೇ ರಾಜ್ಯದಾದ್ಯಂತ ಎರಡು ತಿಂಗಳ ಕಾಲ ರಾಯಚೂರು, ಕೊಪ್ಪಳ, ಬಳ್ಳಾರಿ, ಹುಬ್ಬಳ್ಳಿ ಸೇರಿದಂತೆ 13 ಜಿಲ್ಲೆಯಲ್ಲಿ ಸಂಚಾರ ಮಾಡಿ ಇಂದು ದಾವಣಗೆರೆ ಜಿಲ್ಲೆಯಲ್ಲಿ ಸಂಚಾರ ಮಾಡಲಾಗುತ್ತದೆ. ಕನ್ನಡತಾಯಿ ಭುವನೇಶ್ವರಿ ದೇವಲಯವು ಶಿರಸಿ ಸಿದ್ದಾಪುರದ ಭುವನಗಿರಿ ಬೆಟ್ಟದಲ್ಲಿ ಮತ್ತು ಹಂಪಿ ನಗರದಲ್ಲಿ ಮಾತ್ರ ಇದೆ. ಬೆಂಗಳೂರಿನಲ್ಲಿ ಬಿಡದಿ ಬಳಿ ಭುವನೇಶ್ವರಿ ದೇವಾಲಯ ನಿರ್ಮಿಸಲಾಗುವುದು ಎಂದು ಗಿರಿಜಮ್ಮ ಹೇಳಿದರು.

ರಥೋತ್ಸಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಎಂ. ಚಿದಾನಂದ ಕಂಚಿಕೇರಿ, ಕನ್ನಡ ಪರ ಸಂಘಟನೆಯ ಅಧ್ಯಕ್ಷರಾದ ರಮೇಶ್ ಮಾನೆ, ಪ್ರೀತಂ ಬಾಬು , ಇಲಿಯಾಸ್ ಆಹ್ಮದ್ ಮತ್ತಿತರರು ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಕನ್ನಡನಾಡು ಹಿತರಕ್ಷಣಾ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಕೆ.ವಿ. ಕೃಷ್ಣಮೂರ್ತಿ, ಪ್ರಕಾಶ್ ಮಂದಾರ, ಕೃಷ್ಣ ಪಿ. ರಾಜೋಳ್ಲಿ ಅತೀಷ್, ಕಾಳಿಂಗ್, ಶೇಷಾಚಲಾ ಮತ್ತಿತರರು ಹಾಜರಿದ್ದರು.

error: Content is protected !!