ಹರಿಹರ, ಮೇ 25 – ನಗರದ ನಗರಸಭೆ ವತಿಯಿಂದ ನನ್ನ ಲೈಫ್, ನನ್ನ ಸ್ವಚ್ಛ ನಗರ ಎಂಬ ಅಭಿಯಾನವನ್ನು ಆರಂಭಿಸಲಾಗಿದೆ. ಈ ಅಭಿಯಾನದಡಿ ಮರು ಬಳಕೆ ತ್ಯಾಜ್ಯವನ್ನು ಸಂಗ್ರಹಿಸಲಾಗುವುದು. ನಗರಸಭೆ ಅಧ್ಯಕ್ಷೆ ಶಾಹೀನಾಬಾನು ದಾದಾಪೀರ್ ಅಭಿಯಾನಕ್ಕೆ ಚಾಲನೆ ನೀಡಿದರು. ಈ ಅಭಿಯಾನದ ಮೂಲಕ ಜೂನ್ 5 ರವರೆಗೆ ಸಾರ್ವಜನಿಕರು ತಮ್ಮ ಮನೆಯಿಂದ ಉತ್ಪಾದನೆ ಆಗುವಂತಹ ಪ್ಲಾಸ್ಟಿಕ್, ಪುಸ್ತಕಗಳು ಮತ್ತು ದಿನಪತ್ರಿಕೆಗಳು, ಮಕ್ಕಳ ಆಟಿಕೆ ಸಾಮಾನುಗಳು ಮತ್ತಿತರೆ ಮರು ಬಳಕೆ ತ್ಯಾಜ್ಯವನ್ನು ನಿಗದಿತ ಕೇಂದ್ರಗಳಿಗೆ ತಂದು ಕೊಡಬಹುದಾಗಿದೆ.
ಈ ಸಂದರ್ಭದಲ್ಲಿ ದಾದಾಪೀರ್, ಪೌರಾಯುಕ್ತ ಬಸವರಾಜ್ ಐಗೂರು, ಕಾರ್ಯಪಾಲಕ ಅಭಿಯಂತರ ವಿನಯ್, ಹಿರಿಯ ಆರೋಗ್ಯ ನಿರೀಕ್ಷಕರಾದ ರವಿಪ್ರಕಾಶ್, ಗುರುಪ್ರಸಾದ್, ಕಚೇರಿ ವ್ಯವಸ್ಥಾಪಕ ಶಿವಕುಮಾರ್ ಇಂಜಿನಿಯರ್ಗಳಾದ ಹಮಿದ್, ರಂಗಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.