ಮಲೇಬೆನ್ನೂರು, ಮೇ 14 – ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 135 ಸ್ಥಾನ ಗಳಿಸುವ ಮೂಲಕ ಭರ್ಜರಿ ಬಹುಮತ ಪಡೆದಿರುವುದಕ್ಕೆ ಭಾನುವಾರ ಸಂಜೆ ಮಲೇಬೆನ್ನೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಾಚರಣೆ ಆಚರಿಸಿದರು. ಇಲ್ಲಿನ ಮುಖ್ಯ ವೃತ್ತದಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಂದಿಗಾವಿ ಶ್ರೀನಿವಾಸ್ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ. ಅಬೀದ್ ಅಲಿ, ಎಲ್.ಬಿ. ಹನುಮಂತಪ್ಪ, ಮುಖಂಡರಾದ ಜಿ. ಮಂಜುನಾಥ್ ಪಟೇಲ್, ಬಿ. ವೀರಯ್ಯ, ಪೂಜಾರ್ ಹಾಲೇಶಪ್ಪ, ಸೈಯದ್ ಜಾಕೀರ್, ಎಂ.ಬಿ. ಫೆಜು, ಎಂ.ಬಿ. ಸಜ್ಜು, ಪುಟ್ಟಪ್ಪ, ಎ. ಆರೀಫ್ ಅಲಿ, ಪಿ.ಬಿ. ಬೀರಪ್ಪ, ಡಿ.ಕೆ. ಸಿದ್ದನಗೌಡ, ಪುರಸಭೆ ಸದಸ್ಯರಾದ ನಯಾಜ್, ಸಾಬೀರ್ ಅಲಿ, ಖಲೀಲ್, ದಾದಾಪೀರ್, ಷಾಅಬ್ರಾರ್, ಎಂ.ಬಿ. ರುಸ್ತುಂ, ಶಬ್ಬೀರ್
ಖಾನ್, ಕೆ.ಪಿ. ಗಂಗಾಧರ, ಭೋವಿ ಶಿವು,
ಭೋವಿ ಕುಮಾರ್, ಪಿ.ಹೆಚ್. ಶಿವಕುಮಾರ್, ಎಳೆ ಹೊಳೆ ಕುಮಾರ್, ಚಿಟ್ಟಕ್ಕಿ ನಾಗರಾಜ್, ಎ.ಕೆ. ಪ್ರಕಾಶ್, ಬಸವಾರಾಜ್ ದೊಡ್ಮನಿ, ಹಾಲಿವಾಣದ ಚಿಕ್ಕಣ್ಣ, ಕೆ. ರೇವಣಸಿದ್ದಪ್ಪ, ಕುಡಪಲಿ ತಿಪ್ಪೇಶ್, ಕುಂಬಳೂರು ವಾಸು, ಹರಳಹಳ್ಳಿ ಮಂಜು, ಯಲವಟ್ಟಿ ಕೊಟ್ರೇಶ್ ನಾಯ್ಕ್, ಸೇರಿದಂತೆ ಇನ್ನೂ ಅನೇಕರು ಭಾಗವಹಿಸಿದ್ದರು.