ಸಿದ್ದರಾಮಯ್ಯ ಭೇಟಿ ಮಾಡಿದ ಪಕ್ಷೇತರ ಅಭ್ಯರ್ಥಿ ಎಂ.ಪಿ.ಲತಾ

ಸಿದ್ದರಾಮಯ್ಯ ಭೇಟಿ ಮಾಡಿದ ಪಕ್ಷೇತರ ಅಭ್ಯರ್ಥಿ ಎಂ.ಪಿ.ಲತಾ

ಹರಪನಹಳ್ಳಿ, ಮೇ 14- ಹರಪನಹಳ್ಳಿ ವಿಧಾನಸಭಾ ಕ್ಷೇತ್ರದಿಂದ  ಸ್ವಾತಂತ್ರ್ಯದ ನಂತರ ಎರಡನೇ ಬಾರಿಗೆ ಪಕ್ಷೇತರ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಎಂ.ಪಿ.ಲತಾ ಮಲ್ಲಿಕಾರ್ಜುನ್‍ರ ವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಇಂದು ಭೇಟಿ ಮಾಡಿ ಶುಭ ಕೋರಿದರು.

ಬೆಂಗಳೂರಿನಲ್ಲಿ  ಕೆಪಿಸಿಸಿ ಹಾಗೂ ಎಐಸಿಸಿ ಮುಖಂಡರನ್ನು ಭೇಟಿಯಾಗಿ ಕಾಂಗ್ರೆಸ್ ಪಕ್ಷ ಹಾಗೂ ಸರ್ಕಾರಕ್ಕೆ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ.

ಸಿದ್ದರಾಮಯ್ಯ ಅವರು ಸಹ ಲತಾ ಅವರಿಗೆ ಶುಭ ಕೋರಿ ಪಕ್ಷಕ್ಕೆ ಆಹ್ವಾನಿಸಿದ್ದಾರೆ ಎಂದು ಶಾಸಕರ ಬೆಂಬಲಿಗರು ತಿಳಿಸಿದ್ದಾರೆ.

ನಂತರ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ ಸಿಂಗ್ ಸುರ್ಜಿವಾಲಾ ಅವರನ್ನು ಶಾಸಕಿ ಎಂ.ಪಿ.ಲತಾ ಅವರು ಪತಿ ಹಾಗೂ ಪುತ್ರನ ಜೊತೆ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಅವರೂ ಸಹ ಸಕಾರಾತ್ಮಕವಾಗಿ ಸ್ಪಂದಿಸಿ ಆಹ್ವಾನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. 

ಎಂ.ಪಿ.ಲತಾ ಮಲ್ಲಿಕಾರ್ಜುನ್‌ ಅವರು ಮಾಜಿ ಸಚಿವ ಸಿದ್ದರಾಮಯ್ಯನವರ ಅಪ್ತರಾಗಿದ್ದ ದಿವಂಗತ ಎಂ.ಪಿ.ಪ್ರಕಾಶ್‌ ಅವರ ಮಗಳು. ಅವರು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. 

ಈ ವಿಚಾರವಾಗಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಹರಪನಹಳ್ಳಿ ಕ್ಷೇತ್ರದಿಂದ ವಿಧಾನಸಭೆಗೆ ಪಕ್ಷೇತರ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಎಂ.ಪಿ.ಲತಾ ಮಲ್ಲಿಕಾರ್ಜುನ್‌ ಅವರು ಇಂದು ನಮ್ಮನ್ನು ಭೇಟಿ ಮಾಡಿದರು. ಈ ವೇಳೆ ಅವರಿಗೆ ಶುಭ ಹಾರೈಸಿದೆ ಎಂದು ತಿಳಿಸಿದ್ದಾರೆ

ನಂತರ ಪಕ್ಷೇತರ ಶಾಸಕಿ ಎಂ.ಪಿ.ಲತಾ ಬೆಂಬಲಿಗ ಎಂ.ವಿ.ಅಂಜಿನಪ್ಪ ನೇತೃತ್ವದ  ಮುಖಂಡರು ಬೆಂಗಳೂರಿನಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಅವರನ್ನು ಭೇಟಿಯಾಗಿ  ಮಾತುಕತೆ ನಡೆಸಿದರು. ಈ ವೇಳೆ  ದಾವಣಗೆರೆಯ ಡಿ.ಬಸವರಾಜ್, ಎಂ.ಪಿ.ಲತಾ ಮಲ್ಲಿಕಾರ್ಜುನ್‌ರವರ ಪುತ್ರ ಗೌತಮ ಪ್ರಭು, ಪುರಸಭೆ ಸದಸ್ಯರಾದ ಡಿ.ಅಬ್ದುಲ್ ರಹಿಮಾನ್ ಸಾಬ್, ಟಿ.ವೆಂಕಟೇಶ್‌, ಲಾಟಿ ದಾದಾಪೀರ್, ಉದ್ದಾರ ಗಣೇಶ್‌, ಗೊಂಗಡಿ ನಾಗರಾಜ್, ಮುಖಂಡರಾದ ಚಿಕ್ಕೇರಿ ಬಸಪ್ಪ, ಪ್ರಶಾಂತ್‌ ಸೇರಿದಂತೆ ಇತರರು ಇದ್ದರು.

error: Content is protected !!