ದಾವಣಗೆರೆ, ಮೇ 11- 625 ಕ್ಕೆ 624 ಅಂಕ ಗಳಿಸಿದ ದಾವಣಗೆರೆ ನಗರದ ಶ್ರೀ ಸಿದ್ಧಗಂಗಾ ಕಾಂಪೋಜಿಟ್ ಹೈಸ್ಕೂಲ್ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಆರ್. ಚೇತನಾಗೆ ದಾವಣಗೆರೆ ದಕ್ಷಿಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ದಾರುಕೇಶ್ ಅವರು ಶಾಲು ಹೊದಿಸಿ, ಪೇಟ ತೊಡಿಸಿ ಹಾರ ಹಾಕಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಬಾಲಕಿಯ ತಂದೆ ನಿವೃತ್ತ ಯೋಧ ರಘುನಾಥ ಜಗತಾಪ್ ಮತ್ತು ತಾಯಿ ರೇಣುಕಾ ಬಾಯಿ, ಶಿಕ್ಷಣ ಸಂಯೋಜಕರಾಗಿದ್ದ ಮುರುಗೇಂದ್ರಯ್ಯ ಹಾಜರಿದ್ದರು. ಬಾಲಕಿಯ ಸಾಧನೆಯನ್ನು ಶ್ಲ್ಯಾಘಿಸಿದ ಶಿಕ್ಷಣಾಧಿಕಾರಿಗಳು, ಮುಂದಿನ ಗುರಿ ಐ.ಎ.ಎಸ್. ಮಾಡಬೇಕೆಂಬುದಾಗಿ ಬಾಲಕಿ ಹೇಳಿದಾಗ ಮತ್ತಷ್ಟು ಸಂಭ್ರಮಿಸಿದರು. ಜಿಲ್ಲೆಗೆ ಕೀರ್ತಿ ಬರುವಂತೆ ಮಾಡಿದ ಸಿದ್ಧಗಂಗಾ ಸಂಸ್ಥೆಯ ಆಡಳಿತ ಮಂಡಳಿ ಮತ್ತು ಬೋಧಕ ವರ್ಗದವರ ಶ್ರದ್ಧೆ ಮತ್ತು ಬದ್ಧತೆಯನ್ನು ಹೊಗಳಿದರು.
January 11, 2025