ಹರಿಹರ : 228 ಮತಗಟ್ಟೆಗಳಿಗೆ ಸಿಬ್ಬಂದಿಗಳ ರವಾನೆ

ಹರಿಹರ : 228 ಮತಗಟ್ಟೆಗಳಿಗೆ ಸಿಬ್ಬಂದಿಗಳ ರವಾನೆ

ಹರಿಹರ, ಮೇ 9 – ಬುಧವಾರ ನಡೆಯಲಿರುವ ಸಾರ್ವತ್ರಿಕ ವಿಧಾನಸಭಾ ಚುನಾವಣೆಯ ನಿಮಿತ್ತವಾಗಿ ನಗರ ಮತ್ತು ಗ್ರಾಮೀಣ ಪ್ರದೇಶಗಳಿಗೆ ಚುನಾವಣೆ ಸಿಬ್ಬಂದಿಗಳು ವಿದ್ಯುನ್ಮಾನ ಯಂತ್ರಗಳೊಂದಿಗೆ ಮತಗಟ್ಟೆಯತ್ತ ತೆರಳಿದರು. ಈ ವೇಳೆ ಮಾತನಾಡಿದ ಚುನಾವಣಾಧಿಕಾರಿ ಉದಯ್ ಕುಮಾರ್ ಕುಂಬಾರ, ತಾಲ್ಲೂಕಿನಲ್ಲಿ ಒಟ್ಟು 2 ಲಕ್ಷದ 7 ಸಾವಿರದ 517 ಮತದಾರರಿದ್ದಾರೆ. ಇಂದು ಬುಧವಾರ ಬೆಳಗ್ಗೆ 7 ಗಂಟೆಯಿಂದ ಮತದಾನ ಪ್ರಕ್ರಿಯೆ ಪ್ರಾರಂಭವಾಗುತ್ತದೆ ಎಂದರು.

ತಾಲ್ಲೂಕಿನ 228 ಬೂತ್‌ನಲ್ಲಿ ಮತದಾನ ನಡೆಯಲಿದ್ದು, ಒಂದು ಮತಗಟ್ಟೆಗೆ 4 ಸಿಬ್ಬಂದಿಗಳು, 45 ಟೀಮ್ ರಿಜರ್ವರ್, 48 ಮೈಕ್ರೋ ಅಬ್ಸರ್ವರ್ ಹಾಗೂ ಪಿಆರ್‌ಓ, ಎಪಿಆರ್ ಓ, ಪಿಓ ಸೇರಿದಂತೆ ಒಟ್ಟು 1800 ಚುನಾವಣೆ ಸಿಬ್ಬಂದಿಗಳಿದ್ದಾರೆ. 28 ಬಸ್, 12 ಮಿನಿ ಬಸ್, 4 ಜೀಪ್ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು. 

ಈ ಸಂದರ್ಭದಲ್ಲಿ ತಹಶೀಲ್ದಾರ್ ಪೃಥ್ವಿ ಸಾನಿಕಂ, ಗ್ರೇಡ್2 ತಹಶೀಲ್ದಾರ್ ಶಶಿಧರಯ್ಯ, ತಾಪಂ ಇಓ ರವಿ, ಪೂಜಾ, ಮಲೇಬೆನ್ನೂರು ಪುರಸಭೆ ಅಧಿಕಾರಿ ರವಿ, ಚುನಾವಣೆ ಸಿಬ್ಬಂದಿಗಳಾದ ಸೋಮಶೇಖರ್, ಉಮೇಶ್, ಅಶೋಕ್, ಮಂಜುನಾಥ್, ಶಿಕ್ಷಕ ಬಿ.ಬಿ. ರೇವಣನಾಯ್ಕ್, ಪೊಲೀಸ್ ಅಧಿಕಾರಿಗಳಾದ ಸಿಪಿಐ ದಯಾನಂದ, ಗೌಡಪ್ಪಗೌಡ, ಪಿಎಸ್ಐ ವೀಣಾ ಮಂಡ್ಯ, ರಾಜು, ಪ್ರಭು ಕೆಳಗಿನಮನೆ ಮತ್ತಿತರರು ಹಾಜರಿದ್ದರು.

error: Content is protected !!