ಎ.ಆರ್.ಜಿ. ಕಾಲೇಜಿನಿಂದ ಮತದಾನ ಜಾಗೃತಿ ಅಭಿಯಾನ

ಎ.ಆರ್.ಜಿ. ಕಾಲೇಜಿನಿಂದ ಮತದಾನ ಜಾಗೃತಿ ಅಭಿಯಾನ

ದಾವಣಗೆರೆ, ಮೇ 9- ಬಾಪೂಜಿ ವಿದ್ಯಾಸಂಸ್ಥೆಯ ಎ.ಆರ್.ಜಿ. ಕಲಾ ಮತ್ತು ವಾಣಿಜ್ಯ ಕಾಲೇಜಿನ ಮತದಾನ ಸಾಕ್ಷರತಾ ಸಂಘ, ರಾಷ್ಟ್ರೀಯ ಸೇವಾ ಯೋಜನೆ, ಎನ್‌ಸಿಸಿ ವತಿಯಿಂದ ಮತದಾನ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಕಾಲೇಜಿನ ಪ್ರಾಂಶುಪಾಲರು, ಅಧ್ಯಾಪಕರು, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದ ಈ ಅಭಿಯಾನ ಕಾಲೇಜಿನಿಂದ ಹೊರಟು, ಡೆಂಟಲ್ ಕಾಲೇಜು ರಸ್ತೆ ಮೂಲಕವಾಗಿ ಗುಂಡಿ ಮಹದೇವಪ್ಪ ವೃತ್ತದಲ್ಲಿ ಮತದಾನದ ಘೋಷಣೆಗಳನ್ನು ಹೇಳುತ್ತಾ, ಮಾನವ ಸರಪಳಿ ರಚಿಸಿ, ನಾಗರಿಕರಿಗೆ ಮತದಾನದ ಮಹತ್ವವನ್ನು ಮನವರಿಕೆ ಮಾಡುವ ಮೂಲಕ ಅಭಿಯಾನವನ್ನು ಯಶಸ್ವಿಗೊಳಿಸಿದರು.

error: Content is protected !!