ದಾವಣಗೆರೆ, ಮೇ 5- ಮತದಾನ ಜಾಗೃತಿಯನ್ನು ಮೂಡಿಸುವ ಮೂಲಕ ಇಲ್ಲಿನ ವಚನಾಮೃತ ಬಳಗದ ವಾರ್ಷಿಕೋತ್ಸವ ಮತ್ತು ಬಸವ ಜಯಂತಿ ಆಚರಿಸಲಾಯಿತು, `ನಿಮ್ಮ ಮತ ನಿಮ್ಮ ಹಕ್ಕು, ಒಂದು ನಿಮಿಷದ ಮತದಾನ ಐದು ವರ್ಷದ ಸಮಾಧಾನ, ಮಗಳನ್ನಾಗಲಿ, ಮತವನ್ನಾಗಲಿ ಯೋಗ್ಯರಿಗೆ ಕೊಡಿ ಎಂದು ವಚನಾಮೃತ ಬಳಗದವರು ಜನತೆಯಲ್ಲಿ ಜಾಗೃತಿ ಮೂಡಿಸಿ ಮನವಿ ಮಾಡಿದರು.
ಮತದಾನ ಜಾಗೃತಿ ಕಾರ್ಯಕ್ರಮವನ್ನು ಮಮತಾ ನಾಗರಾಜ್, ಭಾರತಿ ಜಯಣ್ಣ, ಮನುಜ ಮಹಾ ಲಿಂಗಯ್ಯ ನಡೆಸಿಕೊಟ್ಟರು. ಸೌಮ್ಯ ಸತೀಶ್ ನಿರೂಪಿ ಸಿದರು. ದೀಪ ಕಿರಣ್ ಸ್ವಾಗತಿಸಿದರು. ಮಧುಮತಿ, ತನುಜಾ, ರತ್ನ, ಶಾಂತ, ಸುಮಾ, ಹೇಮಾವತಿ, ಮಂಗಳ ಗೌರಿ, ಭಾರತಿ, ರಾಜಶ್ರೀ, ಸುಜಾತ, ಕವಿತಾ, ದೀಪಾ, ಚಂದ್ರಿಕಾ, ಸರೋಜಾ, ಸುಧಾ, ಶುಭ, ಲತಾ, ಕೋಮಲ ಶಾನ್ವಿ ಇನ್ನು ಮುಂತಾದವರು ಉಪಸ್ಥಿತರಿದ್ದರು.