ಎಸ್ಸೆಸ್ - ಎಸ್ಸೆಸ್ಸೆಂ ಗೆಲುವಿಗಾಗಿ ನಗರ ದೇವಿಗೆ ಉರುಳು ಸೇವೆ

ಎಸ್ಸೆಸ್ - ಎಸ್ಸೆಸ್ಸೆಂ ಗೆಲುವಿಗಾಗಿ ನಗರ ದೇವಿಗೆ ಉರುಳು ಸೇವೆ

ದಾವಣಗೆರೆ, ಮೇ 5- ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಶಾಸಕ ಶಾಮನೂರು ಶಿವಶಂಕರಪ್ಪ ಮತ್ತು ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಸ್.ಎಸ್.ಮಲ್ಲಿಕಾರ್ಜುನ್ ಅವರ ಗೆಲುವಿಗಾಗಿ ಪ್ರಾರ್ಥಿಸಿ ಕಾಂಗ್ರೆಸ್ ಕಾರ್ಯಕರ್ತರು ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿಗೆ ಉರುಳು ಸೇವೆ ನಡೆಸಿದರು.

ಹಗೇದಿಬ್ಬ ಸರ್ಕಲ್ ಬಳಿಯ ನಗರ ದೇವತೆ ಕರಗಲ್ಲಿಗೆ ಪೂಜೆ ಸಲ್ಲಿಸಿದ ಕಾರ್ಯಕರ್ತರು ನಗರ ದೇವತೆ ದೇವಸ್ಥಾನ ದವರೆಗೂ ಉರುಳು ಸೇವೆ ಸಲ್ಲಿಸಿ ಶಾಮನೂರು ಶಿವಶಂಕರಪ್ಪ ಮತ್ತು ಎಸ್.ಎಸ್.ಮಲ್ಲಿಕಾರ್ಜುನ್ ಅವರು ಗೆಲ್ಲುವಂತೆ ಪ್ರಾರ್ಥಿಸಿದರು.

ಕೆಪಿಸಿಸಿ ಓಬಿಸಿ ವಿಭಾಗದ ಪ್ರಧಾನ ಕಾರ್ಯದರ್ಶಿ ಜಮ್ನಳ್ಳಿ ನಾಗರಾಜ್ ಅವರ ನೇತೃತ್ವದಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಚಂದ್ರು ದೀಟೂರ್, ಓಬಿಸಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಧು ಮೈಲಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೆ.ರಾಜೇಶ್, ಕುಂಬಾರ್ ಸಮಾಜದ ಮುಖಂಡರಾದ ಕುಂಬಾರ ಅಜ್ಜಣ್ಣ, ಕುಮಾರ್, ಬಂಡಿ ಯಲ್ಲಪ್ಪ, ಹೊನ್ನಪ್ಪ ಉರುಳು ಸೇವೆ ಮಾಡಿದರು.

ಈ ಸಂದರ್ಭದಲ್ಲಿ ಮಾಜಿ ಮೇಯರ್ ಹೆಚ್.ಬಿ.ಗೋಣೆಪ್ಪ, ನಗರಸಭೆ ಮಾಜಿ ಅಧ್ಯಕ್ಷ ಎಂ.ಮಂಜುನಾಥ್, ಮಾಜಿ ಸದಸ್ಯ ಎಸ್.ಮಲ್ಲಿಕಾರ್ಜುನ್, ಇಂಟಕ್ ಅಧ್ಯಕ್ಷ ಕೆ.ಎಂ.ಮಂಜುನಾಥ್, 6ನೇ ವಾರ್ಡ್ ಅಧ್ಯಕ್ಷ ಸಾಲಮನಿ ಬಸವರಾಜ್, ಆನಂದ ಇಟ್ಟಿಗುಡಿ, ಬಂಡಿ ಚಂದ್ರು, ದುಗ್ಗೇಶ್, ಅನಿಲ್, ರಮೇಶ್, ಮೈಲಿ ಜಯಕುಮಾರ್, ಮಚ್ಚು ಚಂದ್ರು, ಕುಂಬಾರ್ ತಿಪ್ಪೇಶ್, ಡೆಂಟಲ್ ರಾಜು, ತೆಲಿಗಿ ರಾಮಣ್ಣ, ನಜೀರ್ ಸಾಬ್ ಇನ್ನಿತರರಿದ್ದರು.

error: Content is protected !!