ಅಭಿವೃದ್ಧಿಗೆ ಸಹಕರಿಸಿ: ಎಸ್ಸೆಸ್ ಪರ ಪ್ರಥಮ್ ಪ್ರಚಾರ

ಅಭಿವೃದ್ಧಿಗೆ ಸಹಕರಿಸಿ: ಎಸ್ಸೆಸ್ ಪರ ಪ್ರಥಮ್ ಪ್ರಚಾರ

ದಾವಣಗೆರೆ, ಮೇ 3- ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ   ಶಾಮನೂರು ಶಿವಶಂಕರಪ್ಪ ಅವರ ಪರವಾಗಿ ಚಲನಚಿತ್ರ ನಟ, ಬಿಗ್ ಬಾಸ್ ಖ್ಯಾತಿಯ ಪ್ರಥಮ್ ಅವರು ಇಂದು ಪ್ರಚಾರ ನಡೆಸಿ ಮತಯಾಚನೆ ಮಾಡಿದರು.

14ನೇ ವಾರ್ಡ್‍ನ ವಿವಿಧ ಕಡೆಗಳಲ್ಲಿ ಪ್ರಚಾರ ನಡೆಸಿದ ಪ್ರಥಮ್, ದಾವಣಗೆರೆಯಷ್ಟೇ ಅಲ್ಲ ರಾಜ್ಯಾದ್ಯಂತ ಉತ್ತಮ ಹೆಸರು ಗಳಿಸಿರುವ ಅಜಾತ ಶತ್ರು ಶಾಮನೂರು ಶಿವಶಂಕರಪ್ಪ ಅವರನ್ನು ಗೆಲ್ಲಿಸಿ ಅಭಿವೃದ್ಧಿಗೆ ಸಹಕರಿಸುವಂತೆ ಮನವಿ ಮಾಡಿದರು. ದಾವಣಗೆರೆ ನಗರ ಸಮಗ್ರ ಅಭಿವೃದ್ಧಿ  ಆಗಬೇಕಿದೆ. ನಗರದ ಜನತೆ ಅಭಿವೃದ್ಧಿಗೆ ಮತ ನೀಡುವಿರಿ ಎಂಬ ವಿಶ್ವಾಸವಿದೆ.  ಅಲ್ಲದೇ ನಿಮ್ಮ ಮತ ದಾವಣಗೆರೆ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದರು.

ಈ ಸಂದರ್ಭದಲ್ಲಿ  ಅಭ್ಯರ್ಥಿ ಶಾಸಕ ಶಾಮನೂರು ಶಿವಶಂಕರಪ್ಪ, ಉದ್ಯಮಿ ಎಸ್.ಎಸ್.ಗಣೇಶ್, ಮಹಾನಗರ ಪಾಲಿಕೆ ಸದಸ್ಯ ಕೆ.ಚಮನ್‍ಸಾಬ್, ಜಾಕೀರ್ ಅಲಿ, ಶಫೀಕ್‌ ಪಂಡಿತ್, ಎ.ಬಿ.ರಹೀಂ, ಸೀಮೆಎಣ್ಣೆ ಮಲ್ಲೇಶ್, ಡಾ.ದೀಪಕ್ ಬೋಂದಾಡೆ, ಅಣಬೇರು ರಾಜಣ್ಣ ಮತ್ತಿತರರಿದ್ದರು.

error: Content is protected !!