ಮಲೇಬೆನ್ನೂರು, ಏ. 27 – ಪಟ್ಟಣದ ಕಾಳಿಕಾದೇವಿ ದೇವಸ್ಥಾನದಲ್ಲಿ ಜಗನ್ಮಾತೆ ಶ್ರೀ ಕಾಳಿಕಾದೇವಿಯ ನೂತನ ಶಿಲಾ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆಯು ಇಂದು ವಿವಿಧ ಪೂಜೆಗ ಳೊಂದಿಗೆ ನೆರವೇರಿತು. ಇದೇ ಸಂದರ್ಭದಲ್ಲಿ ಯಾದಗಿರಿ ಜಿಲ್ಲೆಯ ಶ್ರೀ ಮದಾನೆಗೊಂದಿ ಸಂಸ್ಥಾನ ಸರಸ್ವತಿ ಪೀಠದ ಶ್ರೀ ಕಾಳಹಸ್ತೇಂದ್ರ ಸ್ವಾಮೀಜಿ ಅವರು `ಶ್ರೀ ಮೌನೇಶ್ವರ ಲೀಲಾ ವಿಲಾಸ’ ಪ್ರವಚನ ನೀಡಿದರು.
ಅರೇಮಾದನ ಹಳ್ಳಿಯ ಸುಜ್ಞಾನ ಮಹಾ ಸಂಸ್ಥಾನ ಮಠದ ಶ್ರೀ ಶಿವ ಸುಜ್ಞಾನ ತೀರ್ಥ ಸ್ವಾಮೀಜಿ ಸಾನಿಧ್ಯ ವಹಿಸಿ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಕಾಳಿಕಾ ದೇವಿಯ ಮಹಾತ್ಮೆ ಕುರಿತು ಮಾತನಾಡಿದರು.
ವಿಶ್ವ ಕರ್ಮ ಸಮಾಜದ ಕೆ.ಎನ್. ವೀರಾಚಾರ್, ಬಸಾಪುರ ನಾಗೇಂದ್ರ ಚಾರ್, ಎಸ್. ರುದ್ರಾಚಾರ್, ಮಲ್ಲಿಕಾರ್ಜುನ್ಚಾರ್ ಮತ್ತಿತರರು ಭಾಗವಹಿಸಿದ್ದರು.
ಉಪನಯನ : ನಾಳೆ ಶುಕ್ರವಾರ ಮುಂಜಾನೆ ವಿಶ್ವಕರ್ಮ ವಟುಗಳ ಸಾಮೂಹಿಕ ಉಪನಯನ, ಜವಳ ನಂತರ 9 ಕ್ಕೆ ಸಾಮೂಹಿಕ ವಿವಾಹ ನಡೆಯಲಿದೆ. ಬೆಳಿಗ್ಗೆ 10.30 ಕ್ಕೆ ಉಭಯ ಶ್ರೀಗಳ ಸಾನಿಧ್ಯದಲ್ಲಿ ಕಾರ್ಮಿಕರ ಸಭೆ ನಡೆಯಲಿದೆ.