ಹರಿಹರ, ಏ. 26 -ಬರುವ ಮೇ 10 ರಂದು ನಡೆಯುವ ಸಾರ್ವತ್ರಿಕ ವಿಧಾನಸಭಾ ಚುನಾವಣೆ ನಿಮಿತ್ತವಾಗಿ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಬಿ. ಪಿ. ಹರೀಶ್ ರವರ ಪರವಾಗಿ ಪ್ರಚಾರ ಮಾಡಲು ನಗರಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ನಾಡಿದ್ದು ದಿನಾಂಕ 28 ರ ಶುಕ್ರವಾರ ಆಗಮಿಸುವುದರಿಂದ ಭದ್ರತಾ ಪಡೆಯ ಅಧಿಕಾರಿಗಳ ತಂಡವು ನಗರದ ಗಾಂಧಿ ಮೈದಾನದಲ್ಲಿ ಸ್ಥಳ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಸ್.ಎಂ. ವೀರೇಶ್ ಹನಗವಾಡಿ, ಕಾರ್ಯದರ್ಶಿ ಜಗದೀಶ್, ಭದ್ರತಾ ಪಡೆಯ ಮುಖ್ಯಸ್ಥ ಕಮಲೇಶ್ ಸಿಂಗ್, ಎಸ್ಪಿ ಡಾ. ಕೆ. ಅರುಣ್, ಡಿವೈಎಸ್ಪಿ ಕನ್ನಿಕಾ ಸಿಕ್ರಿವಾಲ್, ಸಿಪಿಐ ಗಳಾದ ಗೌಡಪ್ಪಗೌಡ, ದಯಾನಂದ, ಪೌರಾಯುಕ್ತ ಐಗೂರು ಬಸವರಾಜ್, ಪಿಎಸ್ಐ ವೀಣಾ ಮಂಡ್ಯ , ರಾಜು , ಪ್ರಭು ಕೆಳಗಿನಮನೆ, ಬಿಜೆಪಿ ನಗರ ಘಟಕದ ಅಧ್ಯಕ್ಷ ಅಜಿತ್ ಸಾವಂತ್, ಅರ್ಜುನ ಬಿ.ಪಿ. ಹರೀಶ್, ಚಂದ್ರಕಾಂತ್ ಗೌಡ, ಇತರರು ಹಾಜರಿದ್ದರು.