ಈ ಬಾರಿ ಜೆಡಿಎಸ್‌ಗೆ ಸ್ಪಷ್ಟ ಬಹುಮತ

ಈ ಬಾರಿ ಜೆಡಿಎಸ್‌ಗೆ ಸ್ಪಷ್ಟ ಬಹುಮತ

ಹರಪನಹಳ್ಳಿಯಲ್ಲಿ ಮಾಜಿ ಸಚಿವ ನಬೀಸಾಬ್ ವಿಶ್ವಾಸ

ಹರಪನಹಳ್ಳಿ, ಏ.17- ಬೆಲೆ ಏರಿಕೆಗಳಿಂದ ಜನ ಬೇಸತ್ತು ಈ ಬಾರಿ ಬಿಜೆಪಿಗೆ ತಕ್ಕ ಪಾಠ ಕಲಿಸುವ ಮೂಲಕ ಜೆಡಿಎಸ್ ಪಕ್ಷಕ್ಕೆ ಸಾಥ್ ನೀಡಲಿದ್ದು, ಜೆಡಿಎಸ್‌ಗೆ ಸ್ಪಷ್ಟ ಬಹುಮತ ಬರಲಿದೆ ಎಂದು ಮಾಜಿ ಸಚಿವ, ಜೆಡಿಎಸ್ ರಾಜ್ಯ ಕಾರ್ಯಾಧ್ಯಕ್ಷ ಎಮ್.ನಬೀಸಾಬ್ ಹೇಳಿದರು.

ಪಟ್ಟಣದ ಹೊಸಪೇಟೆ ರಸ್ತೆಯಲ್ಲಿನ ಪಕ್ಷದ ಕಚೇರಿಯಲ್ಲಿ ತಮ್ಮ ಪುತ್ರ ಎನ್.ಎಂ. ನೂರ್ ಆಹ್ಮದ್ ನಾಮಪತ್ರ ಸಲ್ಲಿಸುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು. ವಿರೋಧ ಪಕ್ಷ ಕಾಂಗ್ರೆಸ್‍ನ ಪ್ರಮುಖ ನಾಯಕರುಗಳ  ನಡುವಿನ  ವೈಮನಸ್ಸು, ಮತ್ತೊಮ್ಮೆ  ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯನ್ನಾಗಿಸಲು ಕಾರಣವಾಗಲಿದೆ ಎಂದರು.

10 ಜನ ಯುವಕರಿಗೆ ಟಿಕೆಟ್ ನೀಡಿದೆ. ಕುಮಾರಸ್ವಾಮಿಯವರು ಕೊಟ್ಟ ಕಾರ್ಯಕ್ರಮಗಳು ನಮ್ಮ ಗೆಲುವಿಗೆ ಶ್ರೀರಕ್ಷೆಯಾಗಲಿದ್ದು, ಪಂಚರತ್ನ ಯೋಜನೆ ಈ ಬಾರಿ ನಮ್ಮ ಪಕ್ಷದ ಗೆಲುವಿಗೆ ಪೂರಕವಾಗಲಿದೆ. ಹರಪನಹಳ್ಳಿ ಕ್ಷೇತ್ರದಲ್ಲಿ ನಮ್ಮ ಪಕ್ಷದ ಬಾವುಟ ಹಾರಿಸುತ್ತೇವೆ ಎಂದರು.

ಜೆಡಿಎಸ್ ಅಭ್ಯರ್ಥಿ ಎನ್.ಎಂ.ನೂರ್ ಆಹಮದ್ ಮಾತನಾಡಿ. ಕುಮಾರಸ್ವಾಮಿಯವರು ರಾಜ್ಯದಲ್ಲಿ ಗ್ರಾಮ ವಾಸ್ತವ್ಯವನ್ನು ಇಡೀ ರಾಷ್ಟ್ರ ಮಟ್ಟಕ್ಕೆ ತೋರಿಸಿಕೊಟ್ಟ ಹೆಗ್ಗಳಿಕೆಯಿದೆ. ರಾಜ್ಯದ ಬರದ ನಾಡುಗಳಿಗೆ ಸಮಗ್ರ ನೀರಾವರಿ ಅಭಿವೃದ್ಧಿ ಮಾಡುವ ಹಂಬಲ ಹೊಂದಿದ್ದಾರೆ. ರೈತರ ಪರವಾಗಿಯೇ ತುಡಿಯುವ ಅವರಿಗೆ ಗೆಲುವು ಕಟ್ಟಿಟ್ಟ ಬುತ್ತಿ. 160 ಹಳ್ಳಿಗಳನ್ನು ಸಂಚರಿಸಿ ಪಟ್ಟಣದಲ್ಲಿ ಹಲವು ವಾರ್ಡ್‌ಗಳಿಗೆ ಭೇಟಿ ನೀಡಿದ್ದೇವೆ. ಒಳ್ಳೆಯ ಅಭಿಪ್ರಾಯ ಇದೆ. ಜನತೆ ನನ್ನನ್ನು ಗೆಲ್ಲಿಸಲಿದ್ದಾರೆ ಎಂಬ ಬಲವಾದ ನಂಬಿಕೆಯಿದೆ ಎಂದರು.

ಜಿಲ್ಲಾಧ್ಯಕ್ಷ ಕೊಟ್ರೇಶಪ್ಪ, ಹಗರಿಬೊಮ್ಮನಹಳ್ಳಿ ಅಭ್ಯರ್ಥಿ ಪರಮೇಶಪ್ಪ ಮಾತನಾಡಿದರು. ಈ ವೇಳೆ ಜೆಡಿಎಸ್ ತಾಲ್ಲೂಕು ಮಾಜಿ ಅಧ್ಯಕ್ಷ ಚೆನ್ನಬಸವನಗೌಡ್ರು. ತಾಲ್ಲೂಕು ಅಧ್ಯಕ್ಷ ಶಿರಹಟ್ಟಿ ದಂಡ್ಯೆಪ್ಪ, ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ಬಳಿಗನೂರು ರಾಮನಗೌಡ್ರು, ಎಲ್. ಪರಮೇಶ್ವರಪ್ಪ, ಸೋಮಶೇಖರಗೌಡ್ರು ಜಿಲ್ಲಾಧ್ಯಕ್ಷ  ಕೊಟ್ರೇಶಪ್ಪ,  ಅಲಮರಸಿಕೆರೆ ಡಿ. ವೀರಣ್ಣ,  ಹಲವಾಗಲು ಮಲ್ಕಪ್ಪ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

error: Content is protected !!