ಮಾಯಕೊಂಡಕ್ಕೆ ವಾಗೀಶ್‌ ಸ್ವಾಮಿ ನಾಮಪತ್ರ ಸಲ್ಲಿಕೆ

ಮಾಯಕೊಂಡಕ್ಕೆ ವಾಗೀಶ್‌ ಸ್ವಾಮಿ ನಾಮಪತ್ರ ಸಲ್ಲಿಕೆ

ದಾವಣಗೆರೆ, ಏ. 17 – ಮಾಯಕೊಂಡ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಬಿ.ಎಂ. ವಾಗೀಶ್‌ ಸ್ವಾಮಿ ಅವರು ಸೋಮವಾರ ದಾವಣಗೆರೆ ತಾಲ್ಲೂಕು ಕಚೇರಿಯಲ್ಲಿ ಚುನಾವಣಾಧಿಕಾರಿ ಶ್ರೀಮತಿ ದುರ್ಗಾಶ್ರೀ ಅವರಿಗೆ ನಾಮಪತ್ರ ಸಲ್ಲಿಸಿದರು. ಲೋಕಿಕೆರೆ ಓಬಳೇಶ್, ಆಲೂರು ಕಿರಣ್‌, ಬಿ.ಜಿ. ಸಿದ್ದಲಿಂಗನಗೌಡ್ರು, ವಕೀಲ ಸಿರಿಗೆರೆ ಗಂಗಾಧರ್‌ ಈ ವೇಳೆ ಹಾಜರಿದ್ದರು. ಇದೇ ದಿನಾಂಕ 20ರಂದು ಮೆರವಣಿಗೆ ಮೂಲಕ ಪುನಃ ನಾಮಪತ್ರ ಸಲ್ಲಿಸುವ ಕಾರ್ಯಕ್ರಮ ಇದೆ ಎಂದು ವಾಗೀಶ್‌ ಸ್ವಾಮಿ ತಿಳಿಸಿದ್ದಾರೆ.

error: Content is protected !!