ಹೊನ್ನಾಳಿ, ಏ. 17- ಭಾರತದ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರು ದೇಶದ ಕೋಟ್ಯಂತರ ಮಂದಿಯ ಬದುಕಿನ ಬಹುದೊಡ್ಡ ಚಾಲಕಶಕ್ತಿಯಾಗಿದ್ದಾರೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಪ್ರಧಾನ ಸಂಚಾಲಕ ಕುರುವ ಮಂಜುನಾಥ್ ಹೇಳಿದರು.
ಅವರು ಶುಕ್ರವಾರ ಪಟ್ಟಣದ ಶಾಂತಾ ಚಿತ್ರಮಂದಿರದ ಎದುರಿನ ಕಟ್ಟಡದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ)ಹೊನ್ನಾಳಿ-ನ್ಯಾಮತಿ ಅವಳಿ ತಾಲ್ಲೂಕುಗಳ ಸಮಿತಿಯ ನೂತನ ಕಚೇರಿ ಉದ್ಘಾಟಿಸಿ ಹಾಗೂ ಅಂಬೇಡ್ಕರ್ ಅವರ 132ನೇ ಜನ್ಮ್ಮ ದಿನವನ್ನು ಆಚರಿಸಿ ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಎಲ್ಲರಿಗೂ ಸಿಹಿ ವಿತರಿಸಿ ಮಾತನಾಡಿದರು.
ಉಪಪ್ರಧಾನ ಸಂಚಾಲಕ ಜಗದೀಶ್ ಕುಂಬಳೂರು ಮಾತನಾಡಿ, ಅಂಬೇಡ್ಕರ್ ಅವರು ದೇಶಕ್ಕೆ ನೀಡಿದ ಸಂವಿಧಾನ ಬಲವಾಗಿ ಸಮಾಜದ ದಲಿತ ವರ್ಗದವರು ಇಂದು ಶಿಕ್ಷಣ, ಉದ್ಯೋಗ ರಾಜಕೀಯ ಮುಂತಾದ ಕ್ಷೇತ್ರಗಳಲ್ಲಿ ಸೌಲಭ್ಯ ಮತ್ತು ಸ್ಥಾನಗಳನ್ನು ಪಡೆಯಲು ಸಹಾಯಕವಾಗಿದೆ ದಲಿತ ಸಮುದಾಯದವರು ಮೂಢನಂಬಿಕೆಗಳಿಂದ ಹೊರಬಂದು, ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಮೂಲಕ ಸಾಮಾಜಿಕವಾಗಿ ಆಭಿವೃದಿಯಾಗಬೇಕಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಂಘಟನಾ ಸಂಚಾಲಕ ತ್ಯಾಗರಾಜ್, ಹೊನ್ನಾಳಿ ತಾಲ್ಲೂಕು ಮಹಿಳಾ ಅಧ್ಯಕ್ಷೆ ಝನ್ಸಿ, ನ್ಯಾಮತಿ ತಾಲ್ಲೂಕು ಮಹಿಳಾ ಅಧ್ಯಕ್ಷೆ ರೇಖಾ, ಉಪಾಧ್ಯಕ್ಷ ರೆಹಮಾನ್, ಸಂಘಟನಾ ಸಂಚಾಲಕ ನಜೀರ್, ಮಹಿಳಾ ಸಂಚಾಲಕರಾದ ಲಕ್ಷ್ಮಿ, ರೂಪ, ಮೀನಾಕ್ಷಮ್ಮ, ರಂಗನಾಥ್, ನಾಗರಾಜ್ ಮಾಸಡಿ ಸೇರಿದಂತೆ ಅನೇಕ ಡಿ.ಎಸ್.ಎಸ್.ಮುಖಂಡರು ಇದ್ದರು.