ಬಂಡಾಯ ಅಭ್ಯರ್ಥಿಯಾಗಿ ಎಂ.ಪಿ.ವೀಣಾ ಮಹಾಂತೇಶ್‌ ಸ್ಪರ್ಧೆ

ಬಂಡಾಯ ಅಭ್ಯರ್ಥಿಯಾಗಿ  ಎಂ.ಪಿ.ವೀಣಾ ಮಹಾಂತೇಶ್‌ ಸ್ಪರ್ಧೆ

ಹರಪನಹಳ್ಳಿ, ಏ.17- ಹರಪನಹಳ್ಳಿ ವಿಧಾನಸಭಾ ಕ್ಷೇತ್ರದ  ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಮಾಜಿ ಉಪ ಮುಖ್ಯಮಂತ್ರಿ ದಿ.ಎಂ.ಪಿ.ಪ್ರಕಾಶ್‌ ಅವರ  ಪುತ್ರಿ ಎಂ.ಪಿ.ವೀಣಾ ಮಹಾಂತೇಶ್‌ ಸೋಮವಾರ ತಮ್ಮ ಬೆಂಬಲಿಗರೊಂದಿಗೆ ತೆರಳಿ ನಾಮಪತ್ರ ಸಲ್ಲಿಸಿದರು.

ಪಟ್ಟಣದ ಪ್ರಸಿದ್ಧ ಶ್ರೀ ಕೋಟೆ ಆಂಜನೇಯ ದೇವಸ್ಥಾನಕ್ಕೆ ತೆರಳಿ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ, ನಂತರ ಪಾದಯಾತ್ರೆ ಮೂಲಕ ತಾಲ್ಲೂಕು ಕಚೇರಿಗೆ ತೆರಳಿ ಚುನಾವಣಾಧಿಕಾರಿ ಟಿ.ವಿ.ಪ್ರಕಾಶ್ ಅವರಿಗೆ ತಮ್ಮ ಉಮೇದುವಾರಿಕೆ ಸಲ್ಲಿಸಿದರು.

ನಾಮಪತ್ರ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾ ಡಿದ ವೀಣಾ  ಅವರು, ಕಳೆದ ನಾಲ್ಕು ವರ್ಷಗಳಿಂದ ಹರಪನಹಳ್ಳಿ ಕ್ಷೇತ್ರದಾದ್ಯಂತ ತಿರುಗಾಡಿ ಪಕ್ಷ ವಹಿಸಿದ ಎಲ್ಲಾ ಜವಾಬ್ದಾರಿಗಳನ್ನು ನಿಭಾಯಿಸಿ ಸಂಘಟನೆ ಮಾಡಿದ್ದೇನೆ. ಆದರೆ, ಪಕ್ಷ ನಾವು ಮಾಡಿದ ಕೆಲಸವನ್ನು ಪರಿಗಣಿಸದೆ ಜಾತಿ, ಹಣ ಬಲ ಇದ್ದವರಿಗೆ ಟಿಕೆಟ್ ನೀಡಿರುವುದು ನೋವುಂಟು ಮಾಡಿದೆ ಎಂದರು.

ಕಾಂಗ್ರೆಸ್ ಪಕ್ಷ ಎಂ.ಪಿ.ಪ್ರಕಾಶ್ ಕುಟುಂಬಕ್ಕೆ ಅನ್ಯಾಯ ಮಾಡಿದೆ. ಕಾಂಗ್ರೆಸ್ ಟಿಕೆಟ್ ನೀಡುವಾಗ ನಮ್ಮನ್ನು ಕರೆದು ಚರ್ಚೆ ಮಾಡದೆ ಏಕಾಏಕಿ ಬೇರೆ ಪಕ್ಷದಿಂದ ವಲಸೆ ಬಂದವರಿಗೆ ಟಿಕೆಟ್ ನೀಡಿ ದೆ. ಇದರಿಂದಾಗಿ ಮಹಿಳೆಯರನ್ನು ಕಡೆಗಣಿಸಿದಂತಾಗಿದೆ ಎಂದು ಹೇಳಿದರು.

ಸ್ವತಂತ್ರ ಅಭ್ಯರ್ಥಿಯಾಗಿ ಸುಮಂತ ರಾಯಸಂರವರು ಸಹ ಪಕ್ಷೇತರರಾಗಿ ತಮ್ಮ ಬೆಂಬಲಿಗ ರೊಂದಿಗೆ ತಾಲ್ಲೂಕು ಮಿನಿ ವಿಧಾನ ಸೌಧಕ್ಕೆ ತೆರಳಿ ತಮ್ಮ ಉಮೇದು ವಾರಿಕೆಯನ್ನು ಸಲ್ಲಿಸಿದ್ದಾರೆ.

ಜೆಡಿಎಸ್ ಅಭ್ಯರ್ಥಿ ನೂರ್‌ ಅಹ್ಮದ್ ಸಹ ಚುನಾವಣಾಧಿಕಾರಿ ಟಿ.ವಿ.ಪ್ರಕಾಶ್‍ರವರಿಗೆ ತಮ್ಮ ನಾಮಪತ್ರ ಸಲ್ಲಿಸಿದರು. 

ಪ್ರಜಾಕೀಯ ಪಕ್ಷದಿಂದ ರವಿ ಲಂಬಾಣಿಯವರು ಸಹ ತಾಲ್ಲೂಕು ಕಚೇರಿಗೆ ತಮ್ಮ ಬೆಂಬಲಿಗರೊಂದಿಗೆ ತೆರಳಿ ಚುನಾವಣಾಧಿಕಾರಿ ಟಿ.ವಿ.ಪ್ರಕಾಶ್‌ ಅವರಿಗೆ ತಮ್ಮ ಉಮೇದು ವಾರಿಕೆಯನ್ನು ಸಲ್ಲಿಸಿದ್ದಾರೆ.

error: Content is protected !!