ಆನಂದಪ್ಪ ಚಿತ್ತ ಜೆಡಿಎಸ್‌ನತ್ತ

ಆನಂದಪ್ಪ ಚಿತ್ತ ಜೆಡಿಎಸ್‌ನತ್ತ

ದಾವಣಗೆರೆ, ಏ.13- ಕಾಂಗ್ರೆಸ್ ಟಿಕೆಟ್ ಕೈತಪ್ಪಿದ‌ ಹಿನ್ನೆಲೆಯಲ್ಲಿ ಮಾಯಕೊಂಡ ವಿಧಾನಸಭಾ ಕ್ಷೇತ್ರದ ಆಕಾಂಕ್ಷಿ ಎಚ್. ಆನಂದಪ್ಪ ಅವರು ತಮ್ಮ ನಿವಾಸದಲ್ಲಿ ಇಂದು ಬೆಂಬಲಿಗರ ಸಭೆ ಕರೆದು ಚರ್ಚಿಸಿದರು.

ಆನಂದಪ್ಪ ಮಾತನಾಡಿ, ಟಿಕೆಟ್ ಸಿಗದೇ ಇರು ವುದು ನೋವು ತಂದಿದೆ. ಇದಕ್ಕಾಗಿ ಯಾರನ್ನೂ ದೂಷಿ ಸುವುದಿಲ್ಲ. ತಮ್ಮೆಲ್ಲರ ಸಲಹೆಯಂತೆ ಮುಂದು ವರೆ ಯುವೆ. ಜೆಡಿಎಸ್ ವರಿಷ್ಠ ಎಚ್.ಡಿ. ಕುಮಾರಸ್ವಾಮಿ ಅವರೊಂದಿಗೆ ಚರ್ಚಿಸಿರುವೆ ಎಂದು ತಿಳಿಸಿದರು. 

ಪಕ್ಷಗಳ ಸ್ಥಳೀಯ ಮುಖಂಡರ ವಿರೋಧ ಕಟ್ಟಿಕೊಂಡು ಯಾವುದೇ ಪಕ್ಷದ ಟಿಕೆಟ್ ತಂದರೂ ಪ್ರಯೋಜನವಾಗದು. ಕ್ಷೇತ್ರದ ಅಭಿವೃದ್ಧಿ ಬಹಳ ಮುಖ್ಯ. ಮಾಯಕೊಂಡ ಕ್ಷೇತ್ರದಲ್ಲಿ ಎಸ್ಸಿ, ಲಿಂಗಾಯ ತರೂ ಸೇರಿ ಎಲ್ಲಾ‌ ಜನಾಂಗದವರಿದ್ದಾರೆ. ಸಮಯಾ ಭಾವದಿಂದ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕಿದೆ. 

ಮುಖಂಡರು ಮಾತನಾಡಿ, ಕಾಂಗ್ರೆಸ್, ‌ಬಿಜೆಪಿ ಜನ ವಿರೋಧಿಯಾಗಿವೆ.‌ ಕಳೆದ‌ ಎರಡು ಬಾರಿ ಚುನಾವಣೆಯಲ್ಲಿ ಅತ್ಯಧಿಕ ಮತ ಗಳಿಸಿ‌ ಜನಮನದಲ್ಲಿ ನೆಲೆ‌ಗೊಂಡಿದ್ದಾರೆ. ಆನಂದಪ್ಪ ಅವರು ಜೆಡಿಎಸ್‌ ಸೇರಿದರೆ ಗೆಲುವು ಸುಲಭವಾಗುತ್ತದೆ. ಕುಮಾರಸ್ವಾಮಿ ರಾಜ್ಯದ ಅಭಿವೃದ್ಧಿಗೆ ಪಣ ತೊಟ್ಟಿದ್ದಾರೆ.‌ ಮುಖ್ಯಮಂತ್ರಿಯಾಗಿ ಹಲವು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಅವರನ್ನು ಗೆಲ್ಲಿಸಲು ಹೋರಾಡೋಣ, ಜೆಡಿಎಸ್‌ಗೆ ಶಕ್ತಿ ತುಂಬೋಣ ಎಂದರು.

ಸಭೆಯಲ್ಲಿದ್ದ ಎಲ್ಲರೂ ಜೆಡಿಎಸ್ ಸೇರಲು‌ ಒಕ್ಕೊರಲಿಂದ ಸಮ್ಮತಿಸಿದರು.

ಮುಖಂಡರಾದ ಕೃಷ್ಣಪ್ಪ ಗೊಲ್ಲರಹಳ್ಳಿ, ಉಮಾಕಾಂತ್, ಚಿರಡೋಣಿ ಮಂಜಣ್ಣ, ಹುಲಿಕಟ್ಟೆ ವೆಂಕಟೇಶ್, ಹೊನ್ನೂರು ಮಂಜಣ್ಣ,  ಶ್ರೀನಿವಾಸ ಹೊನ್ನೂರು, ವೀರಣ್ಣ, ಕಂದಗಲ್ ನಾಗಣ್ಣ, ರೇವಣ್ಣ, ರಮೇಶ್, ಮಂಜಣ್ಣ,  ಮಾಯಕೊಂಡದ ಗುಡ್ಲಿ ತಿಪ್ಪೇಸ್ವಾಮಿ, ಬಿ.ಸಿ. ಬಸವರಾಜಪ್ಪ, ಬಾಲರಾಜ್, ಪೋಸ್ಟ್ ಚಂದ್ರಪ್ಪ, ಗೋಪನಾಳ್ ಬಸವರಾಜ್, ದೇವರಾಜ ನಲ್ಕುಂದ ಮತ್ತಿತರರು ಇದ್ದರು.

error: Content is protected !!