ಹರಪನಹಳ್ಳಿ, ಏ.13- ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸುವ ಕಾರ್ಯ ಆರಂಭವಾದ ಮೊದಲ ದಿನ ಗುರುವಾರ ಒಂದು ನಾಮಪತ್ರ ಸಲ್ಲಿಕೆಯಾಗಿದೆ.
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ (ಕೆಆರ್ಎಸ್) ಅಭ್ಯರ್ಥಿಯಾಗಿ ತಾಲ್ಲೂಕಿನ ನೀಲಗುಂದ ಗ್ರಾಮದ ಈಡಿಗರ ಕರಿಬಸಪ್ಪ ನಾಮಪತ್ರ ಸಲ್ಲಿಸಿದರು ಎಂದು ಚುನಾವಣಾಧಿಕಾರಿ ಟಿ.ವಿ. ಪ್ರಕಾಶ್ ತಿಳಿಸಿದ್ದಾರೆ.