ದಾವಣಗೆರೆ, ಏ. 12- ಕಾದ ಹೆಂಚಿಗೆ ಎಣ್ಣೆ ಸವರಿ ಹಿಟ್ಟಿನಲ್ಲಿ `ಮತದಾನ’, `ಓಟ್ ಮಾಡಿ’, ಹೆಲ್ಪ್ಲೈನ್ ನಂಬರ್ `1950′ , `ವಿಹೆಚ್ಪಿ’ ಆಪ್ ಗಳನ್ನು ಅಕ್ಷರದ ದೋಸೆ ಮೂಲಕ ಹಾಕಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುರೇಶ್ ಹಿಟ್ನಾಳ್ ನಗರದ ಹರಳೆಣ್ಣೆ ಕೊಟ್ರಬಸಪ್ಪ ವೃತ್ತದಲ್ಲಿ ಮತದಾನ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿದರು. ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ವತಿಯಿಂದ ಏರ್ಪಾಡಾಗಿದ್ದ ಈ ಅಭಿಯಾನದಲ್ಲಿ ಜಿ.ಪಂ. ಮುಖ್ಯ ಯೋಜನಾಧಿಕಾರಿ ಮಲ್ಲಾನಾಯ್ಕ, ಪಿಎಇಓ ಶಾರದ ದೊಡ್ಡನಗೌಡ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿ ಮಲ್ಲಿಕಾರ್ಜುನ ಮಠದ್, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಮಂಜಾನಾಯ್ಕ, ಡಯಟ್ ಪ್ರಾಚಾರ್ಯರಾದ ಶ್ರೀಮತಿ ಗೀತಾ ಮತ್ತಿತರರು ಉಪಸ್ಥಿತರಿದ್ದರು.
ದೋಸೆಯಲ್ಲಿ ಅರಳಿದ ಮತದಾನ ಜಾಗೃತಿ
