ಹರಿಹರ, ಏ.12-ವಿಧಾನಸಭಾ ಚುನಾವಣೆ ನಿಮಿತ್ತ ನಗರದ ಮರಿಯ ನಿವಾಸ ಶಾಲಾ ಆವರಣದಲ್ಲಿ ಎ.ಆರ್.ಓ. ಮತ್ತು ಎ.ಪಿ.ಆರ್. ಸೇರಿದಂತೆ ಇತರೆ ಸುಮಾರು 650 ಸಿಬ್ಬಂದಿಗಳಿಗೆ ಚುನಾವಣೆ ಕಾರ್ಯ ನಿರ್ವಹಣೆ ಬಗ್ಗೆ ತರಬೇತಿ ನೀಡಲಾಯಿತು. ಈ ಸಂದರ್ಭದಲ್ಲಿ ಚುನಾವಣಾ ಅಧಿಕಾರಿ ಉದಯಕುಮಾರ್ ಕುಂಬಾರ, ತಹಶೀಲ್ದಾರ್ ಪೃಥ್ವಿ ಸಾನಿಕಂ, ಪೌರಾಯುಕ್ತ ಐಗೂರು, ತಹಶೀಲ್ದಾರ್ ಶಶಿಧರಯ್ಯ ಮತ್ತಿತರರು ಉಪಸ್ಥಿತರಿದ್ದರು.
January 12, 2025