ಹೊನ್ನಾಳಿ, ಏ.12- ತಾಲ್ಲೂಕು ಚುನಾವಣಾ ಆಯೋಗ ಹಾಗೂ ಹೊನ್ನಾಳಿ ಪುರಸಭೆ ವತಿಯಿಂದ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಸಂತೆ ಮೈದಾನದಲ್ಲಿ ಮತದಾನ ಜಾಗೃತಿ ಕಾರ್ಯಕ್ರಮವನ್ನು ಕಾರ್ಯನಿರ್ವಹಣಾಧಿಕಾರಿ ರಾಮಭೋವಿ, ತಹಶೀಲ್ದಾರ್ ಹಾಗೂ ಉಪ ಚುನಾವಣಾಧಿಕಾರಿ ತಿರುಪತಿ ಅವರ ಉಪಸ್ಥಿತಿಯಲ್ಲಿ ನಡೆಸಲಾಯಿತು. ಪುರಸಭೆ ಮುಖ್ಯಾಧಿಕಾರಿ ನಿರಂಜನಿ ಹೆಚ್ (ಪ್ರ), ಕಂದಾಯಾಧಿಕಾರಿ ಪಿ.ವಸಂತ, ಸಿಬ್ಬಂದಿಗಳಾದ ಸಿ. ಪರಮೇಶ್ವರನಾಯ್ಕ, ಬಿ.ಜಿ. ಹರ್ಷವರ್ಧನ, ಸಿ ಭಾಗ್ಯಮ್ಮ, ಆಕಾಶ್, ಎನ್. ರಂಜಿತ, ಹೆಚ್.ಎಸ್. ಮಹಾಂತೇಶ್ ಮತ್ತಿತರರಿದ್ದರು.
January 12, 2025