ಭ್ರಷ್ಟಾಚಾರ ತೊಲಗಿಸಿ ಉತ್ತಮ ನಾಯಕರಾಗಬೇಕು

ಭ್ರಷ್ಟಾಚಾರ ತೊಲಗಿಸಿ ಉತ್ತಮ ನಾಯಕರಾಗಬೇಕು

ದಾವಣಗೆರೆ ವಿಶ್ವವಿದ್ಯಾನಿಲಯದ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಸ್.ಎಸ್. ಪಾಟೀಲ

ದಾವಣಗೆರೆ, ಜ. 27- ಬೋಧಿಸುವ ಗುರುಗಳು ಭ್ರಷ್ಟಾಚಾರ, ಮೂಢನಂಬಿಕೆಯಿಂದ ಮುಕ್ತರಾಗಬೇಕು. ಎನ್ಎಸ್ಎಸ್ ಶಿಬಿರ  ದುಡಿಯೋ ಭಾವ, ರಾಷ್ಟ್ರೀಯ ಭಾವ, ಸೇವಾ ಭಾವವನ್ನು ಶಿಬಿರಾರ್ಥಿಗಳಲ್ಲಿ ಬಿತ್ತನೆ ಮಾಡುವ ಕಾರ್ಯ ಮಾಡುತ್ತಿದೆ ಎಂದು ಮಾಜಿ ಸಚಿವ ಎಸ್.ಎಸ್. ಪಾಟೀಲ ತಿಳಿಸಿದರು.

ದಾವಣಗೆರೆ ವಿಶ್ವವಿದ್ಯಾನಿಲಯ ಎಂಬಿಎ ಸಭಾಂಗಣದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ಹಮ್ಮಿಕೊಂಡಿದ್ದ ಅಂತರ್ ಕಾಲೇಜು ನಾಯಕತ್ವ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.

ಸ್ತ್ರೀ ಕೆಟ್ಟರೆ ದೇಶ ಕೆಟ್ಟಿತು ಎಂಬ ಮಾತಿನ ಜೊತೆಗೆ  ಪ್ರತಿಯೊಬ್ಬ ಮಗುವಿಗೆ ತಾಯಿಯೇ ಮೊದಲ ಗುರು ಮಾತೆ ಆಗಿರುತ್ತಾಳೆ. ಸಹೋದರತ್ವದಲ್ಲಿ ದೇಶದ ಭವಿಷ್ಯವಿದೆ, ದೇಶಕ್ಕೆ ಅಂಟಿರುವ ಭ್ರಷ್ಟಾಚಾರದಂತಹ ಕ್ಯಾನ್ಸರ್  ಮನೆಯಿಂದಲೇ ನಿರ್ಮೂಲನೆ ಮಾಡಿ ಬರುವ ಚುನಾವಣೆಯಲ್ಲಿ ದುಡ್ಡಿಲ್ಲದೆ ಮತದಾನ ಮಾಡಿ. ಭ್ರಷ್ಟಾಚಾರ ತೊಲಗಿಸಿ ದೇಶ ಕಟ್ಟುವ ನಾಯಕರಾಗಿ ಎಂದರು.

ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಕಾರ್ಯಕ್ರಮದಲ್ಲಿ ಮಾತನಾಡಿ, ಮೂಲಭೂತ ಸೌಕರ್ಯವನ್ನು ವಿದ್ಯಾರ್ಥಿಗಳು ಸರಿಯಾದ ಕ್ರಮದಲ್ಲಿ ಬಳಸಿಕೊಳ್ಳಿ ಎಂದು ಹೇಳಿದರು. ತಮ್ಮ ಬಾಲ್ಯಾವಸ್ಥೆಯ ಶಿಕ್ಷಣದ ಕಠಿಣ ದಿನಗಳನ್ನು ತಿಳಿಸಿದರು. ಆಕರ್ಷಕ ಸಂವಹನವನ್ನು ಯುವಕರು ಮೈಗೂಡಿಸಿಕೊಂಡು ಉತ್ತಮ ನಾಯಕರಾಗಿ ಎಂದರು. ಮಾನವ ಪರಿಸರ ದುರ್ಬಳಕೆ ಮಾಡುತ್ತಿದ್ದರಿಂದ ಅಪಾಯ ಹೆಚ್ಚುತ್ತಿದೆ. ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ಉಳಿಸಿ ಎಂದು ಕರೆ ನೀಡಿದರು.

ವಿಶ್ವವಿದ್ಯಾನಿಲಯದ ಕುಲಪತಿ
ಬಿ.ಡಿ. ಕುಂಬಾರ್ ಮಾತನಾಡಿ, ಕಲಿಕಾ ಸೌಲಭ್ಯಗಳು ಹೆಚ್ಚಿದರೂ ಕೂಡ ವಿದ್ಯಾರ್ಥಿಗಳು ಸರಿಯಾಗಿ ವಿದ್ಯಾಭ್ಯಾಸ ಮಾಡುತ್ತಿಲ್ಲ ಎಂದು ವಿದ್ಯಾರ್ಥಿ ಗಳನ್ನು ಕುರಿತು ನಿರಾಸೆ ವ್ಯಕ್ತಪಡಿಸಿದರು.

error: Content is protected !!