ರೈತ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್‌ಗೆ ಜಗಳೂರಿನಲ್ಲಿ ವ್ಯಾಪಕ ಬೆಂಬಲ

ಜಗಳೂರು, ಸೆ. 28- ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೆ ತಂದಿರುವ ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ, ವಿದ್ಯುತ್ ಕಾಯ್ದೆಗಳನ್ನು ಕೂಡಲೇ ಹಿಂಪಡೆಯಲು ಆಗ್ರಹಿಸಿ ವಿವಿಧ ಸಂಘ ಟನೆಗಳು ನೀಡಿದ್ದ ಕರ್ನಾಟಕ ಬಂದ್‌ಗೆ ಸಾರ್ವಜನಿ ಕರಿಂದ ವ್ಯಾಪಕ ಬೆಂಬಲ ವ್ಯಕ್ತವಾಯಿತು.

ಪಟ್ಟಣದ ಮಹಾತ್ಮಾ ಗಾಂಧಿ ವೃತ್ತದಲ್ಲಿ ಕರ್ನಾ ಟಕ ರಾಜ್ಯ ರೈತ ಸಂಘ, ಕಾಂಗ್ರೆಸ್ ಪಕ್ಷ , ಕರವೇ ಹಾಗೂ ಎಐಎಸ್ಎಫ್, ಎಸ್ಎಫ್ಐ, ಸಿಐಟಿಯು, ಎಐಟಿ ಯುಸಿ, ಕೂಲಿ ಕಾರ್ಮಿಕರ ಸಂಘಟನೆ ಸೇರಿದಂತೆ ವಿವಿಧ ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳು ಬೆಳಿಗ್ಗೆ 7 ಗಂಟೆಯಿಂದಲೇ ಪ್ರಮುಖ ಬೀದಿಗಳಲ್ಲಿ ಬೈಕ್
ರಾಲಿಯೊಂ ದಿಗೆ ಸಂಚರಿಸಿ, ಬಂದ್ ಬಗ್ಗೆ ಜಾಗೃತಿ ಮೂಡಿಸಿದರು. ಅಂಗಡಿ ಮುಂಗಟ್ಟುಗಳು, ವ್ಯಾಪಾರಿ ಗಳು, ವರ್ತಕರು, ಬಸ್ ಮಾಲೀಕರು ಸ್ವಯಂ ಪ್ರೇರಿತರಾಗಿ ಬಂದ್‌ಗೆ ಬೆಂಬಲಿಸಿದರು. ನಂತರ ಬಹಿರಂಗ ಸಭೆ ನಡೆಸಿ ತಹಶೀಲ್ದಾರ್ ಡಾ. ನಾಗವೇಣಿ ಅವರಿಗೆ ಲಿಖಿತ ಮನವಿ ಸಲ್ಲಿಸಿದರು.

ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ, ವಿದ್ಯುತ್ ಕಾಯ್ದೆಗಳನ್ನು ಹಿಂಪಡೆಯಬೇಕು. ಕಾರ್ಪೊರೇರ್ಟ್‌ಗಳ ಸುಪರ್ದಿಗೆ ಜಮೀನು ನೀಡಲು ನಿಂತಿರುವ ಸರ್ಕಾರಗಳು ಬಡ ರೈತರನ್ನು ಒಕ್ಕಲೆಬ್ಬಿಸುವ ಹುನ್ನಾರ ನಡೆಸುತ್ತಿವೆ ಎಂದು ಮುಖಂಡರು ಆರೋಪಿಸಿದರು.

ಕಂಪನಿಗಳ ಮಾಲೀಕರು, ಬಂಡವಾಳ ಶಾಹಿ ಗಳು ಕಪ್ಪುಹಣ ಮಾಡಲು ರಾಜಕಾರಣಿಗಳು ಕಾಯ್ದೆ ಗಳನ್ನು ಜಾರಿಗೊಳಿಸುತ್ತಿದ್ದು, ಕೂಡಲೇ ಕಾಯ್ದೆಗ ಳನ್ನು ವಾಪಾಸ್ ಪಡೆಯಬೇಕು. ರೈತರ ಜಮೀನು ಗಳನ್ನು ಉಳಿಸಬೇಕು ಎಂದು ಆಗ್ರಹಿಸಿದರು.

ಹುಚ್ಚವ್ವನಹಳ್ಳಿ ಮಂಜುನಾಥ್ ಬಣ, ರೈತ ಸಂಘದ ಚಿರಂಜೀವಿ, ಗಂಗಾಧರಪ್ಪ, ಚೌಡಪ್ಪ, ಸತೀಶ್, ಎಐಟಿಯುಸಿ ಮಹ್ಮದ್ ಭಾಷಾ, ಸಿಐಟಿ ಯು  ವಕೀಲ ಆರ್. ಓಬಳೇಶ್, ಎಐಎಸ್ಎಫ್‌ನ ಮಾದಿ ಹಳ್ಳಿ ಮಂಜಪ್ಪ, ಯುವರಾಜ್, ಎಸ್ಎಫ್‌ಐನ ಅನಂ ತರಾಜ್, ಮೈಲೇಶ, ಅಂಜಿನಪ್ಪ, ಕಾರ್ಮಿಕ ಸಂಘ ಟನೆಯ ನಿಂಗರಾಜ್,  ಮಹಾಂತೇಶ್, ಕರಿಬಸಪ್ಪ, ಕರವೇ ಸಂಘಟನೆಯ ಅಧ್ಯಕ್ಷ ಮಹಾಂತೇಶ್, ಶಂಭುಲಿಂಗಪ್ಪ, ಸುರೇಶ್ ಸಂಗೊಳ್ಳಿ, ಹಫೀಜ್, ನಿಂಗರಾಜ್, ದಲಿತ ಹೋರಾಟಗಾರ ರಾಜಪ್ಪ, ಗೋವಿಂದರಾಜ್ ಮತ್ತಿತರರು ಭಾಗವಹಿಸಿದ್ದರು.

ಕಾಂಗ್ರೆಸ್‌ನಿಂದ ಪ್ರತಿಭಟನೆ : ವಿವಿಧ ಸಂಘಟ ನೆಗಳು ನೀಡಿದ್ದ ಕರ್ನಾಟಕ ಬಂದ್‌ಗೆ ಬ್ಲಾಕ್ ಕಾಂಗ್ರೆಸ್ ಸಮಿತಿ ಬೆಂಬಲಿಸಿ, ಪ್ರತಿಭಟನೆಯಲ್ಲಿ ಭಾಗವಹಿಸಿತ್ತು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಶೀರ್ ಅಹ್ಮದ್, ಮಾಜಿ ಶಾಸಕ ಹೆಚ್.ಪಿ. ರಾಜೇಶ್ ಮತ್ತು ಪದಾಧಿಕಾರಿಗಳು ಕಾರ್ಯಕರ್ತರು ಪ್ರತ್ಯೇಕ ಪ್ರತಿಭ ಟನಾ ಮೆರವಣಿಗೆ ನಡೆಸಿದರು. 

ಭಗತ್ ಸಿಂಗ್ ಜನ್ಮ ದಿನಾಚರಣೆ : ಪಟ್ಟಣದ ಮಹಾತ್ಮ ಗಾಂಧಿ ವೃತ್ತದ ಬಳಿ ಕರ್ನಾಟಕ ಬಂದ್‌ಗೆ ಬೆಂಬಲಿಸಿ, ಹೋರಾಟ ನಿರತ ಸಂಘಟನಾಕಾರರು 113ನೇ ಭಗತ್ ಸಿಂಗ್ ಜನ್ಮ ದಿನಾಚರಣೆ ಆಚರಿಸಿ, ಪುಷ್ಪಾರ್ಚನೆ ಸಲ್ಲಿಸಿ, ಗೌರವ ಸಲ್ಲಿಸಿದರು.

ಭಗತ್ ಸಿಂಗ್ ಅವರು ಸ್ಪೂರ್ತಿಯ ಸೆಲೆ, ತಮ್ಮ ಕ್ರಾಂತಿಕಾರಿ ವಿಚಾರಧಾರೆಗಳು ತ್ಯಾಗ, ಬಲಿದಾನದ ಮನೋಭಾವ ಮತ್ತು ದೇಶದ ಯುವಜನತೆಗೆ ಸ್ವಾತಂತ್ರ್ಯದ ಕಿಚ್ಚು ಹಚ್ಚಿಸಿದ ದಿಟ್ಟ ಹೋರಾಟದ ಬದುಕನ್ನು ಸ್ಮರಿಸಿದರು. 

ಸಿಪಿಐ ದುರುಗಪ್ಪ, ಪಿಎಸ್‍ಐ ಉಮೇಶ್ ಬಾಬು ಸ್ಥಳದಲ್ಲಿ ಹಾಜರಿದ್ದು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ವ್ಯಾಪಕ ಬಂದೋಬಸ್ತ್ ಕೈಗೊಂಡಿದ್ದರು. 

error: Content is protected !!