ಬಿಐಇಟಿಯಲ್ಲಿ ಐಪಿ ಸೆಲ್ ಉದ್ಘಾಟನೆ

ದಾವಣಗೆರೆ, ಸೆ.22- ನಗರದ ಬಾಪೂಜಿ ವಿದ್ಯಾಸಂಸ್ಥೆ ಹಾಗೂ ಕೆ.ಎಸ್.ಸಿ.ಎಸ್.ಟಿ ಐಐಎಸ್ಸಿ (ಬೆಂಗಳೂರು) ಇವರ ಸಹಯೋಗದಲ್ಲಿ ಬಾಪೂಜಿ ಇಂಜಿನಿಯರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾ ಲಯದಲ್ಲಿ  ಸಂಸ್ಥೆಯ ಸಂಶೋಧನೆ ಮತ್ತು ಅಭಿ ವೃದ್ಧಿ ಘಟಕದ ಐಪಿ ಸೆಲ್ ಅನ್ನು ಇಂದು ಆನ್‌ಲೈನ್ ಕಾರ್ಯಕ್ರಮದ ಮೂಲಕ ಉದ್ಘಾಟಿಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಬಾಪೂಜಿ ವಿದ್ಯಾಸಂಸ್ಥೆ ಆಡಳಿತ ಮಂಡಳಿ ಸದಸ್ಯ ಡಾ. ಸಂಪನ್ ಮುತಾಲಿಕ್ ಮಾತನಾಡಿ, ಸಂಶೋಧನೆ ಕ್ಷೇತ್ರದಲ್ಲಿ ನಡೆಯುವ ಪ್ರತಿ ಚಟುವಟಿಕೆಗಳನ್ನು ಪೇಟೆಂಟ್‌ಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿ ಸಮಾಜಕ್ಕೆ ಉಪಯುಕ್ತವಾಗುವಂತೆ ಮಾಡಬೇಕು ಎಂದು ಅಭಿಪ್ರಾಯಪಟ್ಟರು.

ಸಂಸ್ಥೆಯ ಖಜಾಂಚಿ ಎ.ಎಸ್.ನಿರಂಜನ್‌ ಮಾತನಾಡಿ, ಪ್ರಾಧ್ಯಾಪಕರುಗಳು ಮತ್ತು ಸಂಶೋಧನಾ ವಿದ್ಯಾರ್ಥಿಗಳು ತಮ್ಮ ಐಪಿ ಹಕ್ಕುಗಳನ್ನು ಪಡೆಯುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಬೇಕು ಎಂದು ಅಭಿಪ್ರಾಯಪಟ್ಟರು.

ಬಾಪೂಜಿ ವಿದ್ಯಾಸಂಸ್ಥೆಯ ನಿರ್ದೇಶಕ ಡಾ|| ಎಂ.ಜಿ.ಈಶ್ವರಪ್ಪ ಮಾತನಾಡಿ, ಸಂಶೋಧನೆ ಯಲ್ಲಿ ನಿರತ ಅಧ್ಯಾಪಕರುಗಳು ಮತ್ತು ವಿದ್ಯಾ ರ್ಥಿಗಳು ಈ ಘಟಕದ ಸದ್ಬಳಕೆ ಮಾಡಿಕೊಳ್ಳಲು ಉಪಯುಕ್ತವಾಗಲಿ ಎಂದು ಆಶಿಸಿದರು.

ಮುಖ್ಯ ಭಾಷಣಕಾರರಾಗಿ ಕೆ.ಎಸ್.ಸಿ.ಎಸ್.ಟಿ ಯ ಕಾರ್ಯನಿರ್ವಾಹಕ ಕಾರ್ಯದರ್ಶಿ ಹೆಚ್.ಹೇಮಂತಕುಮಾರ್ ಅವರು, ಒಂದು ವಿದ್ಯಾಸಂಸ್ಥೆಯಲ್ಲಿ ಈ ರೀತಿಯ ಘಟಕಗಳು ಸಂಶೋಧನಾ ಚಟುವಟಿಕೆಗಳಿಗೆ ಹೆಚ್ಚು ಪ್ರೇರಣೆ ನೀಡುತ್ತದೆ ಎಂದು ಹೇಳಿದರು.

ಬಿಐಇಟಿ ಕಾಲೇಜಿನ ನಿರ್ದೇಶಕ ಪ್ರೊ|| ವೈ. ವೃಷಭೇಂದ್ರಪ್ಪ ಅವರು,  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಈ ವರ್ಚ್ಯುವಲ್ ಉದ್ಘಾಟನಾ ಕಾರ್ಯಕ್ರ ಮದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ|| ಅರ ವಿಂದ್‌ ಅವರು ಪಾಲ್ಗೊಂಡಿದ್ದರು. ಕಾರ್ಯ ಕ್ರಮದ ಆಯೋಜಕರು ಹಾಗೂ ಸಂಸ್ಥೆಯ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ಮುಖ್ಯಸ್ಥ ಡಾ|| ಬಿ.ಇ. ರಂಗಸ್ವಾಮಿ ವಂದಿಸಿದರು.

error: Content is protected !!