ಬೆಂಗಳೂರು, ಡಿ. 16 – ನಿಗಮ ಮಂಡಳಿ ಗಳ ಅಧ್ಯಕ್ಷರಿಗೆ ಸಚಿವ ದರ್ಜೆಯ ಸ್ಥಾನಮಾನ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಅದರಂತೆ ರಾಜ್ಯ ಸಾಬೂನು ಮತ್ತು ಮಾರ್ಜಕ ನಿಯಮಿತದ ಅಧ್ಯಕ್ಷ ಕೆ. ಮಾಡಾಳು ವಿರೂಪಾಕ್ಷಪ್ಪ ಹಾಗೂ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ವಿ.ರಾಮಚಂದ್ರ ಅವರಿಗೆ ಸಂಪುಟ ದರ್ಜೆ ಸಚಿವರ ಸ್ಥಾನಮಾನ ನೀಡಲಾಗಿದೆ.
ಲಿಡ್ಕರ್ ಅಧ್ಯಕ್ಷ ಪ್ರೊ. ಎನ್.ಲಿಂಗಣ್ಣ ಅವರಿಗೆ ರಾಜ್ಯ ಸಚಿವ ದರ್ಜೆಯ ಸ್ಥಾನಮಾನ ನೀಡಲಾಗಿದೆ. ಅಮೀನಪ್ಪ ಗೌಡ ಎಸ್. ಪಾಟೀಲ್, ದತ್ತಾತ್ರೇಯ ಸಿ. ಪಾಟೀಲ ರೇವೂರ್, ಎಂ. ಚಂದ್ರಪ್ಪ, ಐಹೊಳೆ ದುರ್ಯೋಧನ ಮಹಾಲಿಂಗಪ್ಪ, ನೆಹರು ಚನ್ನಬಸಪ್ಪ ಓಲೇಕಾರ್, ರಾಜುಗೌಡ, ಕೆ. ಶಿವನಗೌಡ ನಾಯಕ್, ಕಳಕಪ್ಪ ಬಂಡಿ, ಶಂಕರ್ ಪಾಟೀಲ್ ಮುನೇನಕೊಪ್ಪ ಹಾಗೂ ಸಿದ್ದು ಸವದಿ ಅವರು ಸಂಪುಟ ದರ್ಜೆ ಸ್ಥಾನ ಪಡೆದುಕೊಂಡಿರುವ ಇತರೆ ಶಾಸಕರು. ರಾಜ್ ಕುಮಾರ್ ಪಾಟೀಲ್ ಹಾಗೂ ಎ.ಎಸ್. ಜಯರಾಮ್ ಅವರು ರಾಜ್ಯ ಸಚಿವ ಸ್ಥಾನ ಪಡೆದುಕೊಂಡಿದ್ದಾರೆ.