ನಾನು ರಾಜ್ಯದ ನಿಯತ್ತಿನ ನಾಯಿ

ನಾನು ರಾಜ್ಯದ ನಿಯತ್ತಿನ ನಾಯಿ - Janathavaniದಾವಣಗೆರೆ, ಡಿ. 4 – ದೇಶ, ರಾಜ್ಯ, ನನ್ನ ಮತಕ್ಷೇತ್ರ, ಭಾರತಾಂಬೆ ಹಾಗೂ ಭುವನೇಶ್ವರಿಗಾಗಿ ನಾನು ನಿಯತ್ತಿನ ನಾಯಿ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಹೇಳಿದ್ದಾರೆ.

ನಗರದಲ್ಲಿ ಇಂದು ತಮ್ಮನ್ನು ಭೇಟಿಯಾದ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಅವರು, ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ಅವರು ನನ್ನನ್ನು ನಾಯಿ ಎಂದು ಕರೆದಿದ್ದಾರೆ. ನಾನು ನಾಯಿ, ನಿಯತ್ತಿನ ನಾಯಿ. ದೇಶ, ರಾಜ್ಯ ಹಾಗೂ ನ್ಯಾಮತಿ – ಹೊನ್ನಾಳಿ ಮತಕ್ಷೇತ್ರಗಳಲ್ಲಿರುವ ನನ್ನ ಮಾಲೀಕರಿಗೆ ನಿಯತ್ತಿನ ನಾಯಿ ಎಂದು ತಿಳಿಸಿದ್ದಾರೆ.

ನಾಯಿಗೆ ಇರುವ ನಿಯತ್ತು ವಾಟಾಳ್ ನಾಗರಾಜ್ ಅವರಿಗಿಲ್ಲ. ಅವರು ಬ್ಲಾಕ್‌ಮೇಲ್‌ ಮಾಡುವ ವ್ಯಕ್ತಿ. ಅವರು ಶಾಸಕರಾಗಿದ್ದಾಗ ಚಿಕ್ಕಪೇಟೆಯ ವರ್ತಕರು ಕಣ್ಣೀರು ಹಾಕಿದ್ದಾರೆ. ತಾಯಿ ಭುವನೇಶ್ವರಿ ಹೆಸರು ಹೇಳಿಕೊಂಡು ಕೆಲ ಸಂಘಟನೆಗಳು ಬ್ಲಾಕ್‌ಮೇಲ್‌ ಮಾಡುವ ಕೆಲಸ ಮಾಡುತ್ತಿವೆ ಎಂದೂ ಅವರು ಇದೇ ಸಂದರ್ಭದಲ್ಲಿ ಹೇಳಿದರು.

ರಾಜ್ಯದಲ್ಲಿ ಮರಾಠಿ ಸಮುದಾಯದವರ ಅಭಿವೃದ್ಧಿ ನಿಗಮ ರಚನೆಯಾಗಿದೆ. ಬೇರೆ ಬೇರೆ ಜಾತಿಯವರಿಗೆ ನಿಗಮ ಇರುವಂತೆಯೇ ಮರಾಠರಿಗೂ ರಚನೆಯಾಗಿದೆ. ಇದು ಮರಾಠಿ ಭಾಷೆಯ ನಿಗಮವಲ್ಲ ಎಂದು ರೇಣುಕಾಚಾರ್ಯ ತಿಳಿಸಿದ್ದಾರೆ.

ಇವರು ಪ್ರತಿನಿತ್ಯ ನಮ್ಮೊಂದಿಗಿದ್ದಾರೆ. ಇವರಿಗೆ ಮರಾಠಿ ಭಾಷೆಯೇ ಗೊತ್ತಿಲ್ಲ. ದಾವಣಗೆರೆಯಲ್ಲಿ, ರಾಜ್ಯದಲ್ಲಿ ನೆಲೆಸಿರುವ ಇವರುವ ಕನ್ನಡವನ್ನೇ ಆರಾಧಿಸುತ್ತಿದ್ದಾರೆ. ಕನ್ನಡದಲ್ಲಿ ವ್ಯವಹಾರ ಮಾಡುತ್ತಿದ್ದಾರೆ. ಅವರ ಅಭಿವೃದ್ಧಿಗೆ, ಮೂಲಭೂತ ಸೌಲಭ್ಯ ಕಲ್ಪಿಸಲು ಸರ್ಕಾರ ನಿಗಮ ಮಾಡಿ ಅನುದಾನ ಬಿಡುಗಡೆ ಮಾಡಿದೆ ಎಂದವರು ಹೇಳಿದರು.

error: Content is protected !!