ಸ್ಮಾರ್ಟ್ ಕಾಮಗಾರಿ ಚುರುಕಿಗೆ ಕ್ರಮ : ಸಚಿವ ಭೈರತಿ ಬಸವರಾಜ

ದಾವಣಗೆರೆ, ಜ. 25 – ನಗರದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ಚುರುಕುಗೊಳಿಸಲು ಕ್ರಮ ತೆಗೆದುಕೊಳ್ಳಲಾಗು ವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ ತಿಳಿಸಿದ್ದಾರೆ.

ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಅವರಿಗೆ, ಸ್ಮಾರ್ಟ್ ಸಿಟಿ ಕಾಮಗಾರಿ ವಿಳಂಬವಾಗುತ್ತಿರುವ ಕುರಿತು ಪ್ರಶ್ನಿಸಿದಾಗ, ಮಳೆಗಾಲ ಮುಗಿದಿದೆ. ಇನ್ನು ಮುಂದೆ ಕೆಲಸಗಳು ವೇಗವಾಗಿ ನಡೆಯಲಿವೆ ಎಂದಿದ್ದಾರೆ.

ಬುಧವಾರ ಬೆಳಿಗ್ಗೆ ಸ್ಮಾರ್ಟ್ ಸಿಟಿ ಯೋಜನೆಯ ಕುರಿತು ಅಧಿಕಾರಿಗಳ ಜೊತೆ ಪರಿಶೀಲನೆ ನಡೆಸಿದ್ದೇನೆ. ಕಾಮಗಾರಿ ವಿಳಂಬವಾದ ಬಗ್ಗೆ ವಿವರ ಪಡೆದಿದ್ದೇನೆ. ಇನ್ನು ವೇಗವಾಗಿ ಕೆಲಸ ಮಾಡಲು ತಿಳಿಸಿದ್ದೇನೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಮತ್ತೆ ಪರಿಶೀಲನೆ ನಡೆಸುತ್ತೇನೆ ಎಂದು ತಿಳಿಸಿದರು.

ಮರಾಠ ನಿಗಮ ರಚಿಸಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಮರಾಠ ಜನಾಂಗದವರಿಗೆ ನಿಗಮ ರಚಿಸಲಾಗಿದೆಯೇ ಹೊರತು ಮರಾಠ ಭಾಷಿಗರಿಗೆ ಅಲ್ಲ. ಸರ್ಕಾರ ಕನ್ನಡಕ್ಕೆ ಧಕ್ಕೆ ತರುವ ಕೆಲಸ ಮಾಡಲ್ಲ. ನಾವು ಕನ್ನಡ ಉಳಿಸಿ ಬೆಳೆಸುವ ಕೆಲಸ ಮಾಡುತ್ತೇವೆ. ನಾವು
ಕನ್ನಡ ಸಂಘಟನೆಗಳ ಜೊತೆ ಇರುತ್ತೇವೆ ಎಂದು ತಿಳಿಸಿದರು.

ಚಿಗಟೇರಿ ಆಸ್ಪತ್ರೆಯನ್ನು ಹೊಸದಾಗಿ ನಿರ್ಮಿಸುವ ಪ್ರಸ್ತಾವನೆ ಇದೆ. ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳಿದಾಗ ಈ ಬಗ್ಗೆ ಚರ್ಚಿಸಲಾಗಿದೆ. ಹೊಸ ಆಸ್ಪತ್ರೆಗಾಗಿ ವಿಸ್ತೃತ ಯೋಜನಾ ವರದಿ ರೂಪಿಸಲು ತಿಳಿಸಲಾಗಿದೆ ಎಂದವರು ಮತ್ತೊಂದು ಪ್ರಶ್ನೆಗೆ ಉತ್ತರಿಸಿದ್ದಾರೆ.

ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಶಾಸಕರು ಭೇಟಿ ಮಾಡುತ್ತಿರುವುದರಲ್ಲಿ ವಿಶೇಷವೇನಿಲ್ಲ ಎಂದು ಇನ್ನೊಂದು ಪ್ರಶ್ನೆಗೆ ಉತ್ತರಿಸಿದ ಭೈರತಿ, ಇಲಾಖೆಯ ಕೆಲಸಕ್ಕಾಗಿ ಶಾಸಕರು ಭೇಟಿ ಮಾಡುತ್ತಾರೆ. ಈ ಸಂದರ್ಭದಲ್ಲಿ ರಾಜಕೀಯ ಚರ್ಚೆಗಳು ನಡೆದಿಲ್ಲ. ನನ್ನ ಬಳಿಯೂ ಹಲವು ಶಾಸಕರು ಬರುತ್ತಾರೆ ಎಂದು ತಿಳಿಸಿದರು.

error: Content is protected !!