ರೈತರನ್ನು ಕಾಡುವುದೇ ಅಧಿಕಾರಿಗಳ ಕೆಲಸ : ಶಾಮನೂರು ಲಿಂಗರಾಜ್

ದಾವಣಗೆರೆ, ಜು.30- ರೈತರನ್ನು ದಾರಿ ತಪ್ಪಿಸಿ, ಕಾಡುವುದೇ ಸಂಬಂಧಪಟ್ಟ ಇಲಾಖೆ ಕೆಲಸವಾಗಿದೆ ಎಂದು ಭಾರತೀಯ ರೈತ ಒಕ್ಕೂಟದ ಅಧ್ಯಕ್ಷ ಹೆಚ್.ಆರ್.ಲಿಂಗರಾಜ್ ಕಿಡಿ ಕಾರಿದ್ದಾರೆ.

ಇಲಾಖೆಯಲ್ಲಿ ನೀರಿನ ನಿರ್ವಹಣೆ ಗೊತ್ತಿಲ್ಲದ ಅಧಿಕಾರಿಗಳೇ ಹೆಚ್ಚಾಗಿರುವ ಕಾರಣ, ಪದೇ ಪದೇ ರೈತರಿಗೆ ತೊಂದರೆ ಕೊಡುತ್ತಿದ್ದಾರೆ ಎಂದು ದೂರಿದ್ದಾರೆ.

1956 ರ ಕಾನೂನು ಪ್ರಕಾರ ಬೆಳೆ ಉಲ್ಲಂಘಿಸಿದರೆ, ಕಠಿಣ ಕ್ರಮ ಎಂದು ಪ್ರಕಟಣೆಯಲ್ಲಿದೆ. ಆದರೆ, 1956ರ ಕಾನೂನು ಪ್ರಕಾರ ಅಕ್ರಮ ಪಂಪ್‌ಸೆಟ್‌ದಾರರ ಮೇಲೆ ಏಕೆ ಕ್ರಮ ಕೈಗೊಂಡಿಲ್ಲ ? ಎಂದು ಪ್ರಶ್ನಿಸಿದ್ದಾರೆ.

ಹೈಕೋರ್ಟ್ ಆದೇಶವಿದ್ದರೂ, ಏಕೆ ಅಕ್ರಮ ಪಂಪ್‌ಸೆಟ್‌ಗಳನ್ನು ತೆರವುಗೊಳಿಸಿಲ್ಲ. ಇದೇ ರೀತಿ ದಾರಿ ತಪ್ಪಿಸಿದರೆ, ಅಂತಹ ಅಧಿಕಾರಿಗಳ ವಿರುದ್ಧ ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ. ಆಗಸ್ಟ್ ತಿಂಗಳಲ್ಲಿ ಮಳೆ ಬಂದು, ಅಣೆಕಟ್ಟು ಭರ್ತಿಯಾಗುವುದು ವಾಡಿಕೆ. ಮಳೆ ಈಗಲೇ ನಿಲ್ಲುತ್ತೆ ಎನ್ನಲು ಇವರೇನು ಹವಾಮಾನ ಇಲಾಖೆ ತಜ್ಞರೇ ? ಎಂದು ಪ್ರಶ್ನಿಸಿದ್ದಾರೆ. ಒಟ್ಟು 37 ಟಿಎಂಸಿಯಲ್ಲಿ ಡೆಡ್ ಸ್ಟೋರೇಜ್ 9 ಟಿಎಂಸಿ, ಕುಡಿಯುವ ನೀರಿಗೆ (ಮೈಲಾರ ಜಾತ್ರೆ) 1.5 ಟಿಎಂಸಿ ಹೋದರೆ, 25 ಟಿಎಂಸಿ ಬೆಳೆಗೆ ಬಳಕೆ ಮಾಡಬಹುದು ಎಂದು ಸ್ಪಷ್ಟನೆ ನೀಡಿದ್ದಾರೆ.

error: Content is protected !!