ದಾವಣಗೆರೆ, ಜೂ. 29 – ಹರಿಹರದ ಒಂಭತ್ತು ಜನ ಸೇರಿದಂತೆ ಜಿಲ್ಲೆಯ ಹನ್ನೊಂದು ಜನರು ಸೋಮವಾರ ಕೊರೊನಾದಿಂದ ಗುಣಮುಖರಾಗಿ ಬಿಡುಗಡೆ ಯಾಗಿದ್ದಾರೆ. ಹರಿಹರದ ಅಗಸರ ಬೀದಿಯ ಐವರು, ರಾಜನಹಳ್ಳಿಯ ಮೂವರು ಸೇರಿದಂತೆ ಒಂಭತ್ತು ಜನರು ಬಿಡುಗಡೆಯಾಗಿದ್ದಾರೆ. ಬಿಡುಗಡೆಯಾದ ಇನ್ನಿಬ್ಬರು ಚನ್ನಗಿರಿಯ ಕುಂಬಾರ ಬೀದಿಯವರಾಗಿದ್ದಾರೆ.
ಇದೇ ದಿನದಂದು ಹೊನ್ನಾಳಿಯ ಇಬ್ಬರಲ್ಲಿ ಸೋಂಕು ಕಾಣಿಸಿಕೊಂಡಿದೆ. ಫ್ಲೂದಿಂದ ಬಳಲುತ್ತಿದ್ದ ದೊಡ್ಡೇರಿಯ ವ್ಯಕ್ತಿ ಹಾಗೂ ಬೆಂಗಳೂರಿಗೆ ಪ್ರಯಾಣ ಮಾಡಿದ್ದ ಚಿನ್ನಿಕಟ್ಟೆಯ ವ್ಯಕ್ತಿಯೊಬ್ಬ ರಲ್ಲಿ ಸೋಂಕಿರುವುದು ಕಂಡು ಬಂದಿದೆ. ಇದರಿಂದಾಗಿ ಜಿಲ್ಲೆಯಲ್ಲಿ ಸಕ್ರಿಯ ಸೋಂಕಿತರ ಸಂಖ್ಯೆ 33ಕ್ಕೆ ಇಳಿಕೆಯಾಗಿದೆ. ಜಿಲ್ಲೆಯಲ್ಲಿ ಇದುವರೆಗೂ 297 ಜನರಲ್ಲಿ ಸೋಂಕು ಕಂಡು ಬಂದಿದ್ದು, 257 ಜನರು ಗುಣ ಹೊಂದಿದ್ದಾರೆ.