ಹರಿಹರ, ಡಿ. 28 – ತಾಲ್ಲೂಕಿನ ಮಲೇಬೆನ್ನೂರು ಪುರಸಭೆ ಮತ್ತು ನಗರದ ಹೈಸ್ಕೂಲ್ ಬಡಾವಣೆಯ 21 ನೇ ವಾರ್ಡಿನಲ್ಲಿ ನಡೆದ ಚುನಾವಣೆಗಳ ಮತ ಯಂತ್ರಗಳನ್ನು ಜಿ.ಬಿ.ಎಂ.ಎಸ್. ಪ್ರೌಢಶಾಲಾ ಕೊಠಡಿಯಲ್ಲಿ ಬಿಗಿ ಭದ್ರತೆಯಲ್ಲಿ ಇರಿಸಲಾಗಿದೆ.
ಜಿಲ್ಲೆಯ ಅಕ್ಷರ ದಾಸೋಹ ಇಲಾಖೆಯ ಅಧಿ ಕಾರಿ ಗಂಗಾಧರಪ್ಪ, ತಹಶಿಲ್ದಾರ್ ಕೆ.ಬಿ. ರಾಮಚಂದ್ರಪ್ಪ ಮತ್ತು ಶಿಕ್ಷಣ ಇಲಾಖೆಯ ಬಿಇಓ ಸಿದ್ದಪ್ಪ ನವರ ಸಮ್ಮುಖದಲ್ಲಿ ಮತ ಯಂತ್ರಗಳನ್ನು ಭದ್ರಪಡಿಸಲಾಗಿದೆ. ನಾಡಿದ್ದು ದಿನಾಂಕ 30ರ ಗುರುವಾರ ಫಲಿತಾಂಶ ಪ್ರಕಟವಾಗಲಿದೆ. ಚುನಾವಣಾ ಭರಾಟೆಯ ನಂತರ ಅಭ್ಯರ್ಥಿಗಳು ಫಲಿತಾಂಶದ ನಿರೀಕ್ಷೆಯಲ್ಲಿದ್ದಾರೆ.
ಈ ಸಂದರ್ಭದಲ್ಲಿ ನಗರ ಠಾಣೆಯ ಪಿಎಸ್ಐ ಸುನಿಲ್ ಬಸವರಾಜ್ ತೆಲಿ, ಪ್ರಭಾರಿ ಪಿಎಸ್ಐ ಪಾಂಡುರಂಗ, ಕೃಷಿ ಇಲಾಖೆಯ ನಾರದಪ್ಪ, ಅಕ್ಷರ ದಾಸೋಹ ಇಲಾಖೆಯ ರಾಮಕೃಷ್ಣಪ್ಪ, ನಗರಸಭೆ ಚುನಾವಣೆ ಅಧಿಕಾರಿ ಶಿವಕುಮಾರ್, ಚಂದ್ರನಾಯ್ಕ್, ಉಮೇಶ್ ಇತರರು ಉಪಸ್ಥಿತರಿದ್ದರು.