ಹರಪನಹಳ್ಳಿ, ಡಿ.19- ಪಟ್ಟಣದ ಹೊರವಲಯದಲ್ಲಿರುವ ದೇವರ ತಿಮಲಾಪುರ ಗ್ರಾಮದ ಪ್ರಸಿದ್ಧ ಶ್ರೀ ವೆಂಕಟೇಶ್ವರ ದೇವರ ರಥೋತ್ಸವ ಭಾನುವಾರ ರಾತ್ರಿ ಅಪಾರ ಭಕ್ತರ ನಡುವೆ ಸಡಗರದಿಂದ ಜರುಗಿತು.
ಬೆಳಿಗ್ಗೆ ಪಂಚಾಮೃತ ಅಭಿಷೇಕದೊಂದಿಗೆ ವಿವಿಧ ಪೂಜೆಗಳು ನಡೆದವು. ಮಧ್ಯಾಹ್ನ 12ಕ್ಕೆ ಬ್ರಹ್ಮ ರಥೋತ್ಸವ, ಸಂಜೆ ದೇವಸ್ಥಾನದಲ್ಲಿ ಶ್ರೀ ವೆಂಕಟೇಶ್ವರ ದೇವರ ಪೂಜೆಯನ್ನು ನೆರವೇರಿಸಿ, ಪಲ್ಲಕಿ ಉತ್ಸವದ ಮೂಲಕ ರಥದ ಬಳಿ ಆಗಮಿಸಿ, ಮೂರು ಸುತ್ತು ಪ್ರದಕ್ಷಿಣೆ ಹಾಕಿದ ನಂತರ ಹರಾಜು ಹಾಕಲಾಯಿತು. ಸ್ವಾಮಿಯ ಧ್ವಜವನ್ನು ತಿಮ್ಲಾಪುರದ ಗೌಡಪ್ಪರ ಕೆಂಚಪ್ಪ 51 ಸಾವಿರಗಳಿಗೆ ತಮ್ಮದಾಗಿಸಿಕೊಂಡರು, ಹೂವಿನ ಹಾರವನ್ನು ತಳವಾರ ನಾಗರಾಜ್ ವಾಲ್ಮೀಕಿ ನಗರ 38 ಸಾವಿರಕ್ಕೆ ಪಡೆದರು. ನಂತರ ಪೂರ್ವಾಭಿಮುಖವಾಗಿ ರಥ ಸಾಗಿತು.
ಸಿಪಿಐ ಕಮ್ಮಾರ ನಾಗರಾಜ್, ಪಿಎಸ್ಐ ಸಿ.ಪ್ರಕಾಶ್ ಹಾಗೂ ಪೊಲೀಸ್ ಸಿಬ್ಬಂದಿಗಳು ಸೂಕ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದರು.
ಕೆಪಿಸಿಸಿ ಮಹಿಳಾ ಕಾರ್ಯದರ್ಶಿ ಎಂ.ಪಿ.ಲತಾ ಮಲ್ಲಿಕಾರ್ಜುನ್, ಪುರಸಭೆ ಅಧ್ಯಕ್ಷ ಮಂಜುನಾಥ ಇಜಂತಕರ್, ಸದಸ್ಯರುಗಳಾದ ಎಂ.ವಿ.ಅಂಜಿನಪ್ಪ, ಗೊಂಗಡಿ ನಾಗರಾಜ್, ಗ್ರಾ.ಪಂ ಸದಸ್ಯರಾದ ರಮೇಶ್, ಪೂಜಾರ ಪ್ರಸನ್ನ, ಅನುಷ ನಾಗರಾಜ್, ರೇಣುಕಾ ಮಂಜುನಾಥ್, ಕಟ್ಟಿ ರಂಗನಾಥ್, ಡಾ.ಹರ್ಷ ಕಟ್ಟಿ, ದಂಡಿನ ಹರೀಶ್, ಕಟ್ಟಿ ಆನಂದಪ್ಪ, ದೇವಸ್ಥಾನದ ಗುಮಾಸ್ತ ರಮೇಶ್, ಗ್ರಾಮದ ಮುಖಂಡರಾದ ಸಣ್ಣ ನಿಂಗಪ್ಪ, ಮೂಡ್ಲಪ್ಪ, ಜೆಟ್ಟಪ್ಪರ ಮಂಜುನಾಥ್, ಜಿ.ಈಶ್ವರ, ವಕೀಲ ತಿಪ್ಪೇಶ್, ಅರ್ಚಕರಾದ ಶ್ರೀನಿವಾಸ ಪೂಜಾರ, ವಿಷ್ಣು ಪೂಜಾರ, ಲಕ್ಷ್ಮಿಪತಿ, ಆನಂದ ಸೇರಿದಂತೆ ಇತರರು ಈ ಸಂದರ್ಭದಲ್ಲಿ ಭಾಗವಹಿಸಿದ್ದರು.