ನಗರದಲ್ಲಿ ಲಾರಿಗಳ ಸಂಚಾರಕ್ಕೆ ಸಮಯ ನಿಗದಿಪಡಿಸಲು ಒತ್ತಾಯ

ನಗರದಲ್ಲಿ ಲಾರಿಗಳ ಸಂಚಾರಕ್ಕೆ ಸಮಯ ನಿಗದಿಪಡಿಸಲು ಒತ್ತಾಯ - Janathavaniದಾವಣಗೆರೆ, ಡಿ.19- ಇತ್ತೀಚೆಗೆ ನಗರದಲ್ಲಿ ಸರಣಿ ರಸ್ತೆ ಅಪಘಾತಗಳು ಹೆಚ್ಚಾಗುತ್ತಿದ್ದು, ಇದನ್ನು ತಡೆಯುವ ನಿಟ್ಟಿನಲ್ಲಿ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲು ಮತ್ತು ಹೆವಿ ಲೋಡ್ ಲಾರಿಗಳು ನಗರದಲ್ಲಿ ಸಂಚರಿಸಲು ಬೆಳಿಗ್ಗೆ 5 ರಿಂದ 9 ಗಂಟೆಯವರೆಗೆ ಸಮಯ ನಿಗದಿಪಡಿಸಿ, ಸರಣಿ ಅಪಘಾತಗಳನ್ನು ತಪ್ಪಿಸಿ, ನಗರದಲ್ಲಿ ಆಗುತ್ತಿರುವ ಅಕಾಲಿಕ ಅಪಘಾತಗಳನ್ನು ತಪ್ಪಿಸಬೇಕೆಂದು ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಎ. ನಾಗರಾಜ್ ಒತ್ತಾಯಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಅವರಿಗೆ ಇಂದು ಮನವಿ ಸಲ್ಲಿಸಿದ ಅವರು, ಕಳೆದ ಒಂದು ವಾರದಿಂದ ನಗರಾದ್ಯಂತ ಹಲವಾರು ಅಪಘಾತಗಳು ಸಂಭವಿಸಿ, ಸಾವು-ನೋವುಗಳು ಉಂಟಾಗುತ್ತಿವೆ. ಈ ಅಪಘಾತಗಳಿಗೆ ರಾಷ್ ಡ್ರೈವಿಂಗ್ ಕಾರಣವಾಗಿದ್ದು, ಅಲ್ಲದೇ ಸ್ಮಾರ್ಟ್ ಸಿಟಿ ಹಿನ್ನೆಲೆಯಲ್ಲಿ ಪ್ರತಿ ರಸ್ತೆಗಳು ಕೂಡಾ ಸಿಮೆಂಟೀಕರಣಗೊಂಡು ರಸ್ತೆ ಡಿವೈಡರ್‍ಗಳನ್ನು ಸಮರ್ಪಕವಾಗಿ ಅಳವಡಿಸದೇ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ತಿಳಿಸಿದರು.

ನಗರದಲ್ಲಿರುವ ಒಮ್ಮುಖ ರಸ್ತೆಗಳನ್ನು ಕಡ್ಡಾಯವಾಗಿ ಪಾಲಿಸಲು ಸದರಿ ರಸ್ತೆಗ ಳಲ್ಲಿ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿ ಸಬೇಕು ಹಾಗೂ ಕಾಲೇಜು ವಿದ್ಯಾರ್ಥಿ/ವಿದ್ಯಾರ್ಥಿನಿಯರು ತಮ್ಮ ದ್ವಿಚಕ್ರ ವಾಹನಗಳಲ್ಲಿ 3-4 ಜನರು ಓಡಾಡುತ್ತಾ, ವಾಹನ ಚಾಲನೆ ಮಾಡುವಾಗ ಮೊಬೈಲ್ ಬಳಕೆ ಮಾಡುತ್ತಿರುವುದರಿಂದ ಇಂತಹ ಅಪಘಾತ ಗಳು ಸಂಭವಿಸುತ್ತಿದ್ದು, ಪ್ರಮುಖ ತಿರುವುಗಳಲ್ಲಿ ಕಡ್ಡಾಯವಾಗಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿ, ಅಪಘಾತಗಳಾಗುವುದನ್ನು ತಡೆಗಟ್ಟಬೇಕೆಂದು ನಾಗರಾಜ್ ಕೋರಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ, ಅಯೂಬ್ ಪೈಲ್ವಾನ್, ಕೆ.ಜಿ. ಶಿವಕುಮಾರ್, ಮಹಾನಗರ ಪಾಲಿಕೆ ಸದಸ್ಯರಾದ ಚಮನ್‍ಸಾಬ್, ಗಡಿಗುಡಾಳ್ ಮಂಜುನಾಥ್, ಕಾಂಗ್ರೆಸ್ ಮುಖಂಡರಾದ ಹುಲ್ಲುಮನೆ ಗಣೇಶ್, ಹರೀಶ್ ಬಸಾಪುರ, ಯುವರಾಜ್ ಮತ್ತಿತರರು ಉಪಸ್ಥಿತರಿದ್ದರು. 

error: Content is protected !!