ಹರಪನಹಳ್ಳಿ ಶಾಸಕ ಜಿ. ಕರುಣಾಕರ ರೆಡ್ಡಿ ಎಚ್ಚರಿಕೆ
ಹರಪನಹಳ್ಳಿ, ಜೂ.21- ಕೋವಿಡ್ ಇಳಿಮುಖವಾಗಿದ್ದರೂ ಬಳ್ಳಾರಿ ಜಿಲ್ಲೆಯಲ್ಲಿ ಸೆಮಿ ಲಾಕ್ ಇರುವುದು ಆಶ್ಚರ್ಯ ತಂದಿದೆ. ಕೋವಿಡ್ ಇಳಿಮುಖ ಎಂದು ಜನರು ನಿರ್ಲಕ್ಷ್ಯ ವಹಿಸಬಾರದು ಎಂದು ಶಾಸಕ ಜಿ. ಕರುಣಾಕರ ರೆಡ್ಡಿ ಹೇಳಿದರು.
ತಾಲ್ಲೂಕಿನ ಜಂಬುಲಿಂಗನಹಳ್ಳಿ, ಶ್ರೀಕಂಠಪುರ, ಚಿಕ್ಕಮೇಗಳಗೇರಿ, ಹಿರೇಮೇಗಳಗೇರಿ, ಗೊಲ್ಲರಹಟ್ಟಿಗಳಲ್ಲಿ ಬಡವರಿಗೆ ಹಾಗೂ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಆರೋಗ್ಯ ಸಿಬ್ಬಂದಿಗಳಿಗೆ, ಆಟೊ ಚಾಲಕರಿಗೆ ಪುಡ್ ಕಿಟ್ ಗಳನ್ನು ವಿತರಿಸಿ ಮಾತನಾಡಿ, ಕೊರೊನಾ ಸಂಕಷ್ಟದಲ್ಲಿರುವವರಿಗೆ ದಿನಸಿ ಕಿಟ್ ವಿತರಣೆ ಒಂದು ಅಳಿಲು ಸೇವೆ ಆಗಿದೆ. ಸ್ವಲ್ಪ ಮಟ್ಟಿಗಾದರೂ ನಿಮ್ಮ ಕುಟುಂಬಕ್ಕೆ ಸಹಾಯವಾಗಲಿದೆ ಎಂದರು.
ಈಗಾಗಲೇ ಬಳ್ಳಾರಿ ಜಿಲ್ಲೆಯಲ್ಲಿ ಸೋಂಕಿತರ ಪ್ರಮಾಣ ಇಳಿಮುಖ ವಾಗಿದೆ. ಇನ್ನಷ್ಟು ನಿರ್ಬಂಧ ಸಡಿಲಿಕೆಗೆ ಜಿಲ್ಲಾಧಿಕಾರಿಯವರೊಂದಿಗೆ ಮಾತನಾಡು ತ್ತೇನೆ. ಕಡ್ಡಾಯವಾಗಿ ಮಾಸ್ಕ್ ಧರಿಸಿ, ಪರಸ್ಪರ ಅಂತರ ಕಾಪಾಡಿಕೊಳ್ಳಿ, ಕೊರೊನಾ ಹೆಚ್ಚಳವಾಗದಂತೆ ಎಚ್ಚರ ವಹಿಸಿ ಎಂದರು.
ಈ ಸಂದರ್ಭದಲ್ಲಿ ಪುರಸಭಾ ಅಧ್ಯಕ್ಷ ಮಂಜುನಾಥ ಇಜಂತಕರ್, ಬಿಜೆಪಿ ತಾಲ್ಲೂಕು ಅಧ್ಯಕ್ಷ ಸತ್ತೂರು ಹಾಲೇಶ್, ಉಪಾಧ್ಯಕ್ಷ ನಿಟ್ಟೂರು ಸಣ್ಣ ಹಾಲಪ್ಪ, ಜಿಲ್ಲಾ ಬಿಜೆಪಿ ಎಸ್.ಟಿ. ಘಟಕದ ಕಾರ್ಯ ದರ್ಶಿ ಆರ್. ಲೋಕೇಶ್, ಪುರಸಭಾ ಸದಸ್ಯರುಗಳಾದ ದ್ಯಾಮಜ್ಜಿ ರೊಕ್ಕಪ್ಪ, ಕಿರಣ್ ಶಾನ್‌ಭೋಗ್, ಮುಖಂಡರಾದ ಎಂ.ಪಿ. ನಾಯ್ಕ, ಬಾಗಳಿ ಕೊಟ್ರೇಶಪ್ಪ, ಯಡಿಹಳ್ಳಿ ಶೇಖರಪ್ಪ, ಮೆಡಿಕಲ್ ತಿಮ್ಮಣ್ಣ, ಕಡತಿ ರಮೇಶ, ರಾಘವೇಂದ್ರಶೆಟ್ಟಿ, ಯು.ಪಿ. ನಾಗರಾಜ, ಎಂ.ಸಂತೋಷ, ಡಿವೈಎಸ್ಪಿ ಹಾಲಮೂರ್ತಿರಾವ್, ಸಿಪಿಐ ನಾಗರಾಜ್ ಕಮ್ಮಾರ, ವೈದ್ಯಾಧಿಕಾರಿ
ಪಿ.ಕೆ. ವೆಂಕಟೇಶ, ಆಸ್ಪತ್ರೆ ಮುಖ್ಯ ವೈದ್ಯ ಡಾ. ಶಿವಕುಮಾರ್, ಸಹಾಯಕ ಆಡಳಿತಾಧಿಕಾರಿ ವೆಂಕಟೇಶ ಬಾಗಲಾರ್, ಪಿಎಸ್‌ಐ ಪ್ರಕಾಶ್ ಇನ್ನಿತರರಿದ್ದರು.