ನವೀಕೃತ ರೈಲು ನಿಲ್ದಾಣಕ್ಕೆ `ಜಗಜ್ಯೋತಿ ಬಸವೇಶ್ವರ’ರ ಹೆಸರಿಡಲು ಆಗ್ರಹ

ನವೀಕೃತ ರೈಲು ನಿಲ್ದಾಣಕ್ಕೆ `ಜಗಜ್ಯೋತಿ ಬಸವೇಶ್ವರ'ರ ಹೆಸರಿಡಲು ಆಗ್ರಹ - Janathavaniದಾವಣಗೆರೆ, ಮಾ.22- ನಗರದಲ್ಲಿನ ನವೀಕೃತ ರೈಲ್ವೇ ನಿಲ್ದಾಣಕ್ಕೆ ಜಗಜ್ಯೋತಿ ಬಸವೇಶ್ವರ ರೈಲ್ವೇ ನಿಲ್ದಾಣ ಎಂದು ನಾಮಕರಣ ಮಾಡುವಂತೆ ಕರ್ನಾಟಕ ರಕ್ಷಣಾ ವೇದಿಕೆ ಒತ್ತಾಯಿಸಿದೆ.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ಜಿಲ್ಲಾಧ್ಯಕ್ಷ ಎಂ.ಎಸ್. ರಾಮೇಗೌಡ, ವಿಶ್ವಮಾನವರಾಗಿ ಮೆರೆದ ಜಗಜ್ಯೋತಿ ಬಸವೇಶ್ವರು ಹಾಕಿಕೊಟ್ಟ ಆದರ್ಶಗಳನ್ನು ಯುವ ಪೀಳಿಗೆಗೆ ನೆನಪಾಗಿಸುವ ಸಲುವಾಗಿ ರೈಲು ನಿಲ್ದಾಣಕ್ಕೆ ಅವರ ಹೆಸರು ಇಡಬೇಕೆಂದು ಹೇಳಿದರು.

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮತ್ತೆ ರೈಲು ನಿಲ್ದಾಣಗಳಲ್ಲಿ ಕನ್ನಡ ಮರೆಯಾಗಿ ಹಿಂದಿ ಹೇರಿಕೆ ಆರಂಭವಾಗಿರುವುದು ಖಂಡ ನೀಯ. ದಾವಣಗೆರೆ ರೈಲು ನಿಲ್ದಾಣದ ಆವ ರಣದಲ್ಲಿ ಕನ್ನಡಮಯ ವಾತಾವರಣ ನಿರ್ಮಾಣ ವಾಗಬೇಕು. ಅರ್ಜಿಗಳು, ಟಿಕೆಟ್‌ಗಳು, ನಾಮ ಫಲಕಗಳು ಕನ್ನಡದಲ್ಲಿರಬೇಕು. ಸಿಬ್ಬಂದಿಗಳೂ ಕನ್ನಡಿಗರೇ ಹೆಚ್ಚಾಗಿರುವಂತೆ ನೋಡಿಕೊಳ್ಳಬೇಕು. ಆವರಣದಲ್ಲಿ ಹೋಟೆಲ್ ತೆರೆಯಲು ಸ್ಥಳೀಯರಿಗೆ ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದರು.

ಕೇವಲ ಒಂದು ವರ್ಷದಲ್ಲಿ ನಿಲ್ದಾಣ ನವೀಕರಣಗೊಳ್ಳಲು ಶ್ರಮಿಸಿದ ಸಂಸದ ಜಿ.ಎಂ. ಸಿದ್ದೇಶ್ವರ ಅವರಿಗೆ ಅಭಿನಂದಿಸುವುದಾಗಿ ಹೇಳಿದ ರಾಮೇಗೌಡರು, ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಸಂಸದರು ಹಾಗೂ ರೈಲ್ವೇ ಅಧಿಕಾರಿಗಳಿಗೆ ಮನವಿ ಸಲ್ಲಿಸುತ್ತೇವೆ. ಸರ್ಕಾರ ಮತ್ತೆ ಹಿಂದಿ ಹೇರಿಕೆ ಮಾಡಿದರೆ ಮಸಿ ಬಳಿಯುವ ಕೆಲಸ ಮಾಡುತ್ತೇವೆ ಎಂದು ಎಚ್ಚರಿಸಿದರು.

ವೇದಿಕೆ ಗೌರವಾಧ್ಯಕ್ಷ ವಾಸುದೇವ ರಾಯ್ಕರ್, ಬಸವೇಶ್ವರರ ಜಯಂತಿ ಪ್ರಥಮವಾಗಿ ನಡೆದದ್ದು ದಾವಣಗೆರೆ ವಿರಕ್ತಮಠದಲ್ಲಿಯೇ. ಹಾಗಾಗಿ ರೈಲು ನಿಲ್ದಾಣಕ್ಕೂ ಅವರ ಹೆಸರನ್ನು ನಾಮಕರಣ ಮಾಡುವುದು ಉತ್ತಮ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಡಿ.ಮಲ್ಲಿಕಾರ್ಜುನ್, ರಫೀಕ್, ಕೆ.ಜಿ. ಬಸವರಾಜ್, ಖಾದರ್  ಭಾಷಾ, ಧರ್ಮರಾಜ್, ಪರಮೇಶ್, ಜಿ.ಎಸ್. ಸಂತೋಷ್, ಮಂಜುಳಮ್ಮ ಇತರರು ಉಪಸ್ಥಿತರಿದ್ದರು.

error: Content is protected !!