ಲಯನ್ಸ್‌ನಿಂದ `ಆಕ್ಸಿಜನ್’ ಸೇವಾ ಕಾರ್ಯ

ದಾವಣಗೆರೆ, ಮೇ 30- ಕೊರೊನಾ ಹಿನ್ನೆಲೆಯಲ್ಲಿ ಆಕ್ಸಿಜನ್ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಸ್ಥಳೀಯ ಲಯನ್ಸ್ ಕ್ಲಬ್ ವತಿಯಿಂದ ಆಕ್ಸಿಜನ್ ಕಾನ್ಸಂಟ್ರೇಟರ್‌ ಗಳನ್ನು ಖರೀದಿಸಲಾಗಿದ್ದು, ಸಾರ್ವಜನಿಕರ ಸೇವೆಗೆ ಸಮರ್ಪಿಸಲಾಗಿದೆ.

ಲಯನ್ಸ್ ಕ್ಲಬ್ ಅಧ್ಯಕ್ಷ ಎಸ್.ಓಂಕಾರಪ್ಪ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಲಯನ್ಸ್ ಛೇರ್ಮನ್ ಬೆಳ್ಳೂಡಿ ಶಿವಕುಮಾರ್ ಅವರ ಮುಂದಾಳತ್ವದಲ್ಲಿ ಆಕ್ಸಿಜನ್ ಕಾನ್ಸಂ ಟ್ರೇಟರ್‌ನ ಸೇವಾ ಕಾರ್ಯಕ್ಕೆ ಜಿಲ್ಲಾ ಲಯನ್ಸ್ ಮಾಜಿ  ರಾಜ್ಯಪಾಲ ಡಾ.ಬಿ.ಎಸ್.ನಾಗಪ್ರಕಾಶ್ ಅವರು ಸೇವಾ ಕಾರ್ಯಕ್ಕೆ ಚಾಲನೆ ನೀಡಿದರು.

ಲಯನ್ಸ್ ಟ್ರಸ್ಟ್ ಕಾರ್ಯ ದರ್ಶಿ ಅಜ್ಜಂಪುರ ಶೆಟ್ರು ಮೃತ್ಯುಂಜಯ, ಜಿಲ್ಲಾ ಲಯನ್ಸ್ ಚೇರ್ಮನ್ ಆರ್.ಜಿ ಶೀನಿವಾಸ ಮೂರ್ತಿ, ಲಯನ್ಸ್ ಹಿರಿಯ ಸದಸ್ಯರುಗಳಾದ ದೇವರಮನಿ ನಾಗರಾಜ್, ವೈ.ಬಿ.ಸತೀಶ್, ಎನ್.ಆರ್.ನಾಗಭೂಷಣ್ ರಾವ್, ನೀಲಿ ಉಮೇಶ್, ಕಣಕುಪ್ಪಿ ಮುರುಗೇಶಪ್ಪ, ಪಿ.ಸಿ.ಜಗದೀಶ್‌ಕುಮಾರ್, ಹೆಚ್.ಕೆ.ಹೇಮಣ್ಣ, ಕೆ‌.ಟಿ.ಮಹಾಲಿಂಗಪ್ಪ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. 

ಕಾರ್ಯದರ್ಶಿ ಕೋರಿ ಶಿವಕುಮಾರ್ ಸ್ವಾಗತಿಸಿ, ವಂದಿಸಿದರು.  ತುರ್ತಾಗಿ ಆಕ್ಸಿಜನ್ ಬೇಕಾದವರು ಮೊ. 9341020397 ಅಥವಾ 9483619815ಕ್ಕೆ ಸಂಪರ್ಕಿಸುವಂತೆ ಲಯನ್ಸ್ ಕ್ಲಬ್ಬಿನ ವ್ಯವಸ್ಥಾಪಕ ನಾಗರಾಜ್ ತಿಳಿಸಿದ್ದಾರೆ.

error: Content is protected !!