ಮಲೇಬೆನ್ನೂರು, ಮೇ 23- ಗ್ರಾಮೀಣ ಪ್ರದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮತ್ತು ಸೋಂಕಿ ತರನ್ನು ಹೋಂ ಕ್ವಾರಂಟೈನ್ ಮಾಡದೇ ಕೋವಿಡ್ ಕೇರ್ ಸೆಂಟರ್‌ಗಳಿಗೆ ಕರೆ ತರಬೇಕೆಂಬ ಸರ್ಕಾರದ ನಿರ್ದೇಶನದ ಮೇರೆಗೆ ನಂದಿಗುಡಿ ಮತ್ತು ಕೊಂಡಜ್ಜಿ ಯಲ್ಲಿರುವ ಮೊರಾರ್ಜಿ ವಸತಿ ಶಾಲೆಗಳನ್ನು ಸಿಸಿ ಸೆಂಟರ್ ಮಾಡಲು ನಿರ್ಧರಿಸಲಾಗಿದೆ.
ತಹಶೀಲ್ದಾರ್ ಕೆ.ಬಿ.ರಾಮಚಂದ್ರಪ್ಪ, ತಾ.ಪಂ. ಇಒ ಗಂಗಾಧರಪ್ಪ ನೇತೃತ್ವದ ಅಧಿಕಾರಿಗಳ ತಂಡವು ನಂದಿಗುಡಿ ಸಮೀಪ ಇರುವ ಮೊರಾರ್ಜಿ ವಸತಿ ಶಾಲೆ ಮತ್ತು ಕೊಂಡಜ್ಜಿ ಸಮೀಪ ಇರುವ ಮೊರಾರ್ಜಿ ಹಾಗೂ ಇಂದಿರಾ ಗಾಂಧಿ ವಸತಿ ಶಾಲೆಗಳನ್ನು ಕೋವಿಡ್ ಕೇರ್ ಸೆಂಟರ್‌ಗಳನ್ನಾಗಿ ಮಾಡ ಲು ಸೌಲಭ್ಯಗ ಳನ್ನು ಪರಿಶೀಲಿಸಿತು. ಈಗಾಗಲೇ ಗುತ್ತೂರಿ ನಲ್ಲಿ ಸಿಸಿ ಸೆಂಟರ್‌ನಲ್ಲಿ 96 ಜನ ಮತ್ತು ಹರಿಹರ ನಗರದ ಎಸ್‌ಜೆವಿಪಿ ಸಿಸಿ ಸೆಂಟರ್‌ನಲ್ಲಿ 65 ಜನ ಸೋಂಕಿತರು ಇದ್ದಾರೆ.
ಹೊಸದಾಗಿ ಬರುವ ಸೋಂಕಿತರಿಗೆ ಈಗಿರುವ ಸಿಸಿ ಸೆಂಟರ್‌ನಲ್ಲಿ ಜಾಗ ಆಗುತ್ತಿಲ್ಲ. ಆದ್ದರಿಂದ ನಂದಿಗುಡಿ ಮತ್ತು ಕೊಂಡಜ್ಜಿ ಯಲ್ಲೂ ಕೋವಿಡ್ ಕೇರ್ ಸೆಂಟರ್ ತೆರೆಯ ಲು ಸಿದ್ದತೆ ಕೈಗೊಳ್ಳಲಾಗುತ್ತಿದೆ. ಅಗತ್ಯ ಬಿದ್ದರೆ ದೇವರಬೆಳಕೆರೆ ಗ್ರಾಮದಲ್ಲಿರುವ ಮೊರಾರ್ಜಿ ವಸತಿ ಶಾಲೆಯಲ್ಲೂ ಸಿಸಿ ಸೆಂಟರ್ ಪ್ರಾರಂಭಿಸ ಲಾಗುವುದೆಂದು ತಹಶೀಲ್ದಾರ್ ಮಾಹಿತಿ ನೀಡಿದರು. ತಾ. ಹಿರಿಯ ಆರೋಗ್ಯ ಸಹಾಯಕ ಎಂ.ಉಮ್ಮಣ್ಣ, ನಂದಿಗುಡಿ ಮೊರಾರ್ಜಿ ಶಾಲೆಯ ಪ್ರಾಂಶುಪಾಲ ಮಕ್ಸೂದ್ ಅಹಮದ್, ಉಕ್ಕಡಗಾತ್ರಿ ಪಿಡಿಒ ಸುನೀಲ್ ಈ ವೇಳೆ ಹಾಜರಿದ್ದರು.